ಮಂಗಳೂರು: ಚೂರಿಯಿಂದ ಇರಿದು ಸುಲೈಮಾನ್ ಹತ್ಯೆ, ಇಬ್ಬರಿಗೆ ಗಾಯ
ಮಂಗಳೂರು: ಚೂರಿಯಿಂದ ಇರಿದು ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿರುವ ಘಟನೆ ನಗರದ ಹೊರವಲಯದ ವಳಚ್ಚಿಲ್ ಎಂಬಲ್ಲಿ ಮೇ 22ರಂದು ನಡೆದಿದೆ.

ಸುಲೈಮಾನ್ ಕೊಲೆಯಾದ ವ್ಯಕ್ತಿ. ಕುಟುಂಬ ಸಮಸ್ಯೆ ಬಗ್ಗೆ ಮಾತುಕತೆ ನಡೆಸುತ್ತಿದ್ದ ವೇಳೆ ಮುಸ್ತಾಫ ಎಂಬಾತ ಚೂರಿಯಿಂದ ಇರಿದು ಸುಲೈಮಾನ್ ಎಂಬವರನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಸುಲೈಮಾನ್ ಅವರ ಇಬ್ಬರು ಮಕ್ಕಳಿಗೂ ಚೂರಿಯಿಂದ ಇರಿಯಲಾಗಿದ್ದು ಸಿಯಾಬ್ ಎಂಬಾತನ ಎದೆಗೆ ಚೂರಿಯಿಂದ ಇರಿದಿದ್ದು, ಅವರು ನಗರದ ಪಡೀಲ್ ಖಾಸಗಿ ಆಸ್ಪತ್ರೆಯ ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಿಯಾಬ್ ಎಂಬಾತನ ಕೈಗೆ ಇರಿದು ಗಾಯಗೊಳಿಸಲಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.