ಫೆ.11: ಎಸ್ಕೆಎಸ್ಸೆಸ್ಸೆಫ್ ವತಿಯಿಂದ ತಿಂಗಳಾಡಿಯಲ್ಲಿ ರಕ್ತದಾನ ಶಿಬಿರ
ಪುತ್ತೂರು: ಎಸ್ಕೆಎಸ್ಸೆಸ್ಸೆಫ್ ತಿಂಗಳಾಡಿ ಶಾಖೆಯ ಆಶ್ರಯದಲ್ಲಿ ತಿಂಗಳಾಡಿ ಕ್ಲಸ್ಟರ್ ಹಾಗೂ ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಸಹಯೋಗದೊಂದಿಗೆ ಮರ್‌ಹೂಂ ತಸ್ಲೀಂ ಕಟ್ಟತ್ತಾರ್, ಮರ್‌ಹೂಂ ಫಯಾಝ್ ತಿಂಗಳಾಡಿ, ಮರ್‌ಹೂಂ ಬಾತಿಷಾ ಸುಲ್ತಾನ್ ಕೂಡುರಸ್ತೆ ಸ್ಮರಣಾರ್ಥ ಬೃಹತ್ ರಕ್ತದಾನ ಶಿಬಿರ ಫೆ.11ರಂದು ತಿಂಗಳಾಡಿ ಜಿಸ್ತಿಯಾ ಮದ್ರಸ ಸಭಾಂಗಣದಲ್ಲಿ ನಡೆಯಲಿದೆ.
ರಕ್ತದಾನ ಶಿಬಿರದಲ್ಲಿ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.