ಕ್ರೈಂರಾಷ್ಟ್ರೀಯ

ಪ್ರವಾಸಿಗನ ಬೈಕ್ ಮೇಲೆ ಒಂಟಿ ಸಲಗ ದಾಳಿ, ಸ್ಥಳದಲ್ಲೇ ಸಾವು

ಬೈಕ್ ನಲ್ಲಿ ಭಾರತ ಪ್ರವಾಸ ಕೈಗೊಂಡಿದ್ದ ಜರ್ಮನಿ ಮೂಲದ ಪ್ರವಾಸಿಗನ ಮೇಲೆ ಒಂಟಿ ಸಲಗವೊಂದು ದಾಳಿ ಮಾಡಿ ಸಾಯಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ತಮಿಳುನಾಡಿನ ಕೊಯಮತ್ತೂರಿನ ವಾಲ್ಪಾರೈ ಬಳಿಯ ಘಾಟಿ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಸುಮಾರು 77 ವರ್ಷ ವಯಸ್ಸಿನ ಜರ್ಮನ್ ಪ್ರವಾಸಿಗನ ಮೇಲೆ ಒಂಟಿ ಸಲಗ ದಾಳಿ ಮಾಡಿದೆ. ಕಾಡಾನೆ ದಾಳಿಯಿಂದಾಗಿ ಜರ್ಮನ್ ಪ್ರವಾಸಿಗ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಕುರಿತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಬೈಕ್‌ನಲ್ಲಿ ತೆರಳುತ್ತಿದ್ದ ಜರ್ಮನ್‌ ಪ್ರವಾಸಿಗ ಆನೆಯನ್ನು ನೋಡಿದರೂ ಆನೆ ರಸ್ತೆ ಪಕ್ಕಕ್ಕಿದೆ. ಮತ್ತೊಂದು ಬದಿಯಲ್ಲಿ ತಾನು ಹೋಗಬಹುದು ಎಂದು ಭಾವಿಸಿ ವೇಗವಾಗಿ ಬೈಕ್ ನುಗ್ಗಿಸಿದ್ದಾನೆ. ಈ ವೇಳೆ ಬೈಕ್ ನ ಶಬ್ಧ ಕೇಳಿ ತಿರುಗಿದ ಕಾಡಾನೆ ಏಕಾಏಕಿ ಪ್ರವಾಸಿಗನ ಬೈಕ್ ನತ್ತ ನುಗ್ಗಿ ದಾಳಿ ಮಾಡಿದೆ.

ಮೊದಲು ಆತನನ್ನು ತಳ್ಳಿದ ಆನೆ ಬಳಿಕ ಹಿಂದೆ ಬಂದಿತ್ತು. ಅಲ್ಲಿಂದ ಆತ ಎದ್ದು ಬರಲು ಪ್ರಯತ್ನಿಸಿದ ವೇಳೆ ಆನೆ ಆತನ ಮೇಲೆ ಮತ್ತೆ ದಾಳಿ ಮಾಡಿದೆ. ಈ ವೇಳೆ ಆತ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮೃತ ವ್ಯಕ್ತಿಯನ್ನು 77 ವರ್ಷದ ಜರ್ಮನ್ ಪ್ರಜೆ ಮೈಕೆಲ್ ಎಂದು ಗುರುತಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!