ಯುವಕನಿಂದ ತಾಯಿ ಹಾಗೂ ನಾಲ್ವರು ಸಹೋದರಿಯರ ಬರ್ಬರ ಹತ್ಯೆ
ಒಂದೇ ಕುಟುಂಬದ ಐವರು ಕೊಲೆಯಾದ ಸ್ಥಿತಿಯಲ್ಲಿ ಲಕ್ನೋದ ಹೋಟೆಲೊಂದರಲ್ಲಿ ಪತ್ತೆಯಾಗಿದ್ದು ಆರೋಪಿಯೊಬ್ಬನನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

ಕೇಂದ್ರ ಲಕ್ನೋದ ಉಪ ಪೊಲೀಸ್ ಆಯುಕ್ತ (ಡಿಸಿಪಿ) ರವೀನಾ ತ್ಯಾಗಿ, ರಾಜ್ಯ ರಾಜಧಾನಿಯ ನಾಕಾ ಪ್ರದೇಶದ ಹೋಟೆಲ್ ನಲ್ಲಿ ಈ ಭೀಕರ ಘಟನೆ ನಡೆದಿದೆ ಎಂದು ಹೇಳಿದ್ದಾರೆ. ಆರೋಪಿಯನ್ನು ಅರ್ಷದ್ (24) ಎಂದು ಗುರುತಿಸಲಾಗಿದೆ. ಆರೋಪಿ ತನ್ನ ತಾಯಿ ಮತ್ತು ನಾಲ್ವರು ಸಹೋದರಿಯರನ್ನು ಹತ್ಯೆಗೈದಿದ್ದಾನೆ.
ಕೊಲೆಯಾದವರನ್ನು ಆಲಿಯಾ (9), ಅಲ್ಶಿಯಾ (19), ಅಕ್ಸಾ (16) ಮತ್ತು ರಹಮೀನ್ (18) ಎಂದು ಗುರುತಿಸಲಾಗಿದೆ. ಎಲ್ಲರೂ ಅರ್ಷದ್ ಅವರ ಸಹೋದರಿಯರು. ಐದನೆಯವರು ಆರೋಪಿಯ ತಾಯಿ ಅಸ್ಮಾ ಎಂದು ಪೊಲೀಸರು ತಿಳಿಸಿದ್ದಾರೆ.
ಭೀಕರ ಕೃತ್ಯದ ನಂತರ, ಸ್ಥಳೀಯ ಪೊಲೀಸರು ಅಪರಾಧದ ಸ್ಥಳದಿಂದಲೇ ಆತನನ್ನು ತ್ವರಿತವಾಗಿ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಕೌಟುಂಬಿಕ ಕಲಹದಿಂದ ಈತ ಈ ಕೃತ್ಯವನ್ನು ಎಸಗಿದ್ದಾನೆ ಎಎನ್ನಲಾಗುತ್ತಿದೆ. ಈ ಕುರಿತು ವಿವರವಾದ ತನಿಖೆಯನ್ನು ಪ್ರಾರಂಭಿಸಲಾಗಿದ್ದು, ಸಾಕ್ಷ್ಯಗಳನ್ನು ಸಂಗ್ರಹಿಸಲು ಫೋರೆನ್ಸಿಕ್ ತಂಡಗಳನ್ನು ಕಳುಹಿಸಲಾಗಿದೆʼ ಎಂದು ಹೇಳಿದ್ದಾರೆ.