ಪುತ್ತೂರು: ಮೊಬೈಲ್ ಟವರ್ ಬ್ಯಾಟರಿ ಕಳವು ಪ್ರಕರಣ: ಆರೋಪಿ ಬಂಧನ
ಮೊಬೈಲ್ ಟವರ್ ಬ್ಯಾಟರಿಗಳನ್ನು ಕಳವು ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ನ.19ರಂದು ಪುತ್ತೂರು ತಾಲೂಕು ಬಲ್ನಾಡು ಗ್ರಾಮದ ಬುಳೇರಿಕಟ್ಟೆ ಸಾಜರೋಡ್ ಮಾಪಲೆಕೊಚ್ಚಿ ಎಂಬಲ್ಲಿ ನಡೆದ ಮೊಬೈಲ್ ಟವರ್ ಬ್ಯಾಟರಿಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ,
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಗಳ ಪತ್ತೆಗಾಗಿ ಪುತ್ತೂರು ಗ್ರಾಮಾಂತರ ಠಾಣೆಯ ಪಿಐ ರವಿ ಬಿ. ಎಸ್ ರವರ ನೇತೃತ್ವದಲ್ಲಿ ತನಿಖಾ ತಂಡವು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ, ಬಂಟ್ವಾಳ ತಾಲ್ಲೂಕಿನ ವಾಸ:ಕಾವಳಮುಡೂರು ಗ್ರಾಮದ ಹರೀಶ್ ನಾಯ್ಕ (30.ವ), ಎಂಬಾತನನ್ನು ವಿಚಾರಣೆಗೊಳಪಡಿಸಿದಾಗ ಪ್ರಕರಣದಲ್ಲಿ ಕಳವಾದ ಬ್ಯಾಟರಿಗಳನ್ನು ಕಳವು ಮಾಡಿದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ.
ಈತ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯೂ ಬ್ಯಾಟರಿ ಸೆಲ್ ಗಳ ಕಳವು ಮಾಡಿರುವುದು ತನಿಖೆಯಲ್ಲಿ ತಿಳಿದು ಬಂದಿದೆ. ಆರೋಪಿಯಿಂದ ರೂ 48,000.00 ಮೌಲ್ಯದ 24 ಬ್ಯಾಟರಿ ಸೆಲ್ ಗಳನ್ನು, ಕಳವು ಮಾಡಲು ಬಳಸಿದ ರೂ 2.5 ಲಕ್ಷ ಮೌಲ್ಯದ ಕೆಎ 19 ಎಂಬಿ 2226 ನೇ ನೋಂದಣಿಯ ಕಾರು ಮತ್ತು 2 ಮೊಬೈಲ್ ಗಳನ್ನು ಸ್ವಾದೀನಪಡಿಸಿಕೊಳ್ಳಲಾಗಿದೆ. ಈ ಪ್ರಕರಣವನ್ನು ಬೇಧಿಸುವಲ್ಲಿ ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಯತೀಶ್ ಎನ್, ಐ.ಪಿ.ಎಸ್ ರವರ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ರಾಜೇಂದ್ರ ಡಿ.ಎಸ್. ರವರ ನಿರ್ದೇಶನದಲ್ಲಿ, ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಅರುಣ್ ನಾಗೇಗೌಡರವರ ಮಾರ್ಗದರ್ಶನದಲ್ಲಿ, ಪುತ್ತೂರು ಗ್ರಾಮಾಂತರ ಠಾಣಾ ಪ್ರಭಾರ ಪೊಲೀಸ್ ನಿರೀಕ್ಷಕರಾದ ರವಿ ಬಿ. ಎಸ್ ರವರ ನೇತೃತ್ವದ, ಪುತ್ತೂರು ಗ್ರಾಮಾಂತರ ಠಾಣಾ ಪಿ ಎಸ್ ಐ ಜಂಬುರಾಜ್ ಬಿ ಮಹಾಜನ್, ಪಿಎಸ್‍ಐ ( ತನಿಖೆ) ಸುಷ್ಮಾ ಜಿ ಭಂಡಾರಿ, ಎಎಸ್‍ಐ ಮುರುಗೇಶ್ ಬಿ, ಹೆಡ್ ಕಾನ್ಸ್ಟೇಬಲ್ ಗಳಾದ ಪ್ರವೀಣ್ ಎನ್. ಹರೀಶ್ ಜಿ.ಎನ್, ಶರೀಫ್ ಸಾಬ್, ಕಾನ್ಸ್ಟೇಬಲ್ ಗಳಾದ ಚಂದ್ರಶೇಖರ, ಶರಣಪ್ಪ ಪಾಟೀಲ್, ನಾಗೇಶ್ ಕೆ.ಸಿ, ಜಿಲ್ಲಾ ತಾಂತ್ರಿಕ ವಿಭಾಗದ ದಿವಾಕರ್ ಮತ್ತು ಸಂಪತ್ ರವರ ತಂಡ ಕಾರ್ಯನಿರ್ವಹಿ
ಸಿದ್ದರು.