ಸುಳ್ಯ ಅನ್ಸಾರಿಯ ಗಲ್ಫ್ ಆಡಿಟೋರಿಯಂ ಉದ್ಘಾಟನೆ ಹಿನ್ನೆಲೆ: ಜೆಸಿಬಿ ಮೂಲಕ ವಾಹನ ಪಾರ್ಕಿಂಗ್ ವ್ಯವಸ್ಥೆಗೆ ಸ್ಥಳಾವಕಾಶ ಮಾಡಿಕೊಟ್ಟ ನ.ಪಂ ಸದಸ್ಯ ಕೆ.ಎಸ್ ಉಮ್ಮರ್
ಸುಳ್ಯದ ಪ್ರಸಿದ್ಧ ಸಂಸ್ಥೆಯಾಗಿರುವ ಅನ್ಸಾರಿಯಾ ಎಜುಕೇಶನಲ್ ಸೆಂಟರ್ ಇದರ ಅನ್ಸಾರಿಯಾ ಗಲ್ಫ್ ಆಡಿಟೋರಿಯಂ ಉದ್ಘಾಟನಾ ಸಮಾರಂಭ ನ.29ರಂದು ಸುಳ್ಯದಲ್ಲಿ ಅದ್ದೂರಿಯಾಗಿ ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ರಾಜ್ಯ ಮತ್ತು ಅಂತರಾಜ್ಯ ಮಟ್ಟದ ಸಯ್ಯಿದರು,ಉಲಮಾ ಉಮರಾ ಪಂಡಿತರು ಕರ್ನಾಟಕ ರಾಜ್ಯದ ಸಚಿವರುಗಳು ಆಗಮಿಸುತ್ತಿದ್ದು ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗವಹಿಸಲಿದ್ದಾರೆ.
ಇದರ ಅಂಗವಾಗಿ ಸುಳ್ಯದ ಸ್ಥಳಿಯ ಬೋರುಗುಡ್ಡೆ ವಾರ್ಡಿನ ನಗರ ಪಂಚಾಯತಿ ಸದಸ್ಯರಾಗಿರುವ ಕೆ ಎಸ್ ಉಮ್ಮರ್ ರವರು ಆಡಿಟೋರಿಯಂ ಬಳಿ ಇರುವ ಸ್ಥಳಗಳನ್ನು ಜೆಸಿಬಿ ಮೂಲಕ ಸ್ವಚ್ಛಗೊಳಿಸಿ ವಾಹನ ಪಾರ್ಕಿಂಗ್ ಗೆ ಅನುವು ಮಾಡಿಕೊಡುವ ಮೂಲಕ ಸಹಕಾರ ಮಾಡಿದ್ದಾರೆ.