ಪೈಚಾರಿನಲ್ಲಿ 18ನೇ ಸ್ವಲಾತ್ ವಾರ್ಷಿಕ, ರಾಜ್ಯ ಮಟ್ಟದ ದಫ್ ಸ್ಪರ್ಧೆ, ಕಚೇರಿ ಉದ್ಘಾಟನೆ
ಸುಳ್ಯ: ಪೈಚಾರು ಅಲ್ ಅಮೀನ್ ಯೂತ್ ಸೆಂಟರ್ ವತಿಯಿಂದ ಎರಡು ದಿನಗಳ ಕಾಲ ನಡೆದ ಅದ್ದೂರಿ ಸ್ವಲಾತ್ ವಾರ್ಷಿಕ ಕಾರ್ಯಕ್ರಮಕ್ಕೆ ನ. 25ರಂದು ತೆರೆ ಕಂಡಿತು.
ಕೇರಳದ ಕೋಲಪ್ಪುರಂ ಭಾಗದ ಖ್ಯಾತ ವಾಗ್ಮಿ ಧಾರ್ಮಿಕ ಪಂಡಿತ ಸಯ್ಯದ್ ಜಸೀಲ್ ಶಾಮಿಲ್ ಇರ್ಫಾನಿ ತಂಙಳ್ ರವರು ಸ್ವಲಾತ್ ಹಾಗೂ ದುವಾ ಮಜ್ಲಿಸ್ ನೇತೃತ್ವವನ್ನು ನೀಡಿ ಮಾತನಾಡಿ ಸ್ವಲಾತಿನ ಬಗ್ಗೆ ಸಂದೇಶ ನುಡಿಗಳನ್ನಾಡಿದರು.
ಈ ವೇಳೆ ಮಾತನಾಡಿದ ಅವರು ಸುಳ್ಯದ ಪೈಚಾರಿನ ಯುವಕರ ತಂಡವು ಅಲ್ ಅಮೀನ್ ಯೂತ್ ಸೆಂಟರ್ ಎಂಬ ಹೆಸರಿನ ಸಂಸ್ಥೆಯನ್ನು ಕಟ್ಟಿ ಸಾವಿರಾರು ಬಡ ಕುಟುಂಬಕ್ಕೆ ಕಷ್ಟದ ಸಮಯದಲ್ಲಿ ಸಹಾಯ ಹಸ್ತವನ್ನು ನೀಡುತ್ತಿರುವುದು ಶ್ಲಾಘನೀಯವಾಗಿದೆ. ಇಂತಹ ಯುವಕರನ್ನು ಪ್ರೋತ್ಸಾಹಿಸುವುದು ಮತ್ತು ಸಹಕರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.ಆದರ್ಶ ಮತ್ತು ವಿಶ್ವಾಸ ಇಲ್ಲದ ಸೇವೆಯು ಸಮಾಜದಲ್ಲಿ ನಿಷ್ಪ್ರಯೋಜಕ.ಯಾವುದೇ ಉತ್ತಮ ಕಾರ್ಯಕ್ರಮವನ್ನು ಮಾಡುವುದಾದರೂ ಅದು ಸರ್ವಶಕ್ತನಾದ ಅಲ್ಲಾಹನ ಮೇಲೆ ಇರುವ ಭಯದಿಂದ ಆಗಿರಬೇಕೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಲ್ ಅಮೀನ್ ಯೂತ್ ಸೆಂಟರ್ ಇದರ ಗೌರವ ಅಧ್ಯಕ್ಷ ಹಾಜಿ ಇಬ್ರಾಹಿಂ ಫೈಝಿ ವಹಿಸಿದ್ದರು. ಮೊಗರ್ಪಣೆ ಜುಮಾ ಮಸೀದಿಯ ಮುದರ್ರಿಸ್ ಹಾಫಿಲ್ ಸೌಕತ್ ಅಲಿ ಸಖಾಫಿ ಹಾಗೂ ಅಂಬಟಡ್ಕ ಇಖ್ರಾ ಜುಮಾ ಮಸೀದಿ ಖತೀಬರಾದ ಸೈಯದ್ ಮಾರಿಫ್ ರಜಾ ರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡಿದರು.
ಸ್ಥಳೀಯ ಪೈಚಾರು ಜುಮಾ ಮಸೀದಿಯ ಖತೀಬರಾದ ಶಮೀರ್ ಅಹಮದ್ ನಈಮಿ ಪ್ರಭಾಷಣ ನಡೆಸಿದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಸಯ್ಯಿದ್ ತ್ವಾಹಿರ್ ಸಅದಿ ತಂಙಳ್ ಸುಳ್ಯ,ಸಯ್ಯದ್ ಝೖನುಲ್ ಆಬಿದೀನ್ ತಂಙಳ್ ಜಯನಗರ,ಹಾಫಿಲ್ ಹಾಮಿದ್ ಹಿಮಮಿ ಸಖಾಫಿ ಅನ್ಸಾರಿಯ ನಾವೂರು, ಇರ್ಫಾನ್ ಸಖಾಫಿ ಅಲ್ ಹಿಕಮಿ ಅಲ್ ಅರ್ಶದಿ ಗಾಂಧಿನಗರ, ಉದ್ಯಮಿ ಅಬ್ದುಲ್ ರಹಿಮಾನ್ ಸಂಕೇಶ್, ಮುನೀರ್ ಸಅದಿ ಅಲ್ ಅರ್ಶದಿ ಜಾಲ್ಸೂರು, ಅಶ್ರಫ್ ಮುಸ್ಲಿಯಾರ್ ಕುಂಭರ್ಚೋಡು,ಹಂಝ ಝಹರಿ ಸದರ್ ಮುಅಲ್ಲಿಂ,
ಮುಹಮ್ಮದ್ ಜಸೀರ್ ಸಖಾಫಿ ಮುಅಲ್ಲಿಂ ಖುವ್ವತುಲ್ ಇಸ್ಲಾಂ ಮದರಸ ಪೈಚಾರ್,
ರಶೀದ್ ಝೖನಿ ಸದರ್ ಮುಅಲ್ಲಿಂ ಶಾಂತಿನಗರ,
ದುಗಲಡ್ಕ ಮುಹಿಯ್ಯದ್ದೀನ್ ಜುಮಾ ಮಸ್ಜಿದ್ ಸಮಿತಿ ಅಧ್ಯಕ್ಷ ಹಾಜಿ ಅಬ್ದುಲ್ ರಹಿಮಾನ್, ಪೈಂಬೆಚ್ಚಾಲು ಬದ್ರಿಯಾ ಜುಮಾ ಮಸೀದಿ ಆಡಳಿತ ಸಮಿತಿಯ ಅಧ್ಯಕ್ಷ ಅಬ್ದುಲ್ ಖಾದರ್ ಟಿ ಎಂ, ಪೖಚಾರ್ ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಹನೀಫ್ ಪಿ ಕೆ, ಎಸ್ ಎಂ ಎ ಸುಳ್ಯ ರೀಜಿನಲ್ ಅಧ್ಯಕ್ಷ ಅಬ್ದುಲ್ ಹಮೀದ್ ಸುಣ್ಣ ಮೂಲೆ, ಜಯನಗರ ಮಸ್ಜಿದ್ ಮತ್ತು ಮದರಸ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಸೖನಾರ್ ಜಯನಗರ, ಅಲ್ ಅಮೀನ್ ಯೂತ್ ಸೆಂಟರ್ ಉಪಾಧ್ಯಕ್ಷ ಹನೀಫ ಅಲ್ಫಾ, ಪೈಚಾರು ಕಾರ್ ಬಜಾರ್ ಮಾಲಕರಾದ ಹಸೖನಾರ್ ಹಾಜಿ, ಅಲ್ ಅಮೀನ್ ಯೂತ್ ಸೆಂಟರ್ ಪ್ರಧಾನ ಕಾರ್ಯದರ್ಶಿ ಅಬುಸಾಲಿ, ಹಾಗೂ ಸ್ಥಳೀಯ ಮುಖಂಡರಾದ ಅಬ್ಬಾಸ್ ಪಿ, ರಜಾಕ್ ಆರ್ತಾಜೆ, ಮುಹಿಯದ್ದೀನ್ ಲತೀಫಿ, ಖಾದರ್ ಅಡ್ಕಾರ್,ಮಾಜಿ ಅಧ್ಯಕ್ಷ ಇಬ್ರಾಹಿಂ,ಹಾಜಿ ಮುಸ್ತಫಾ ಸುಳ್ಯ, ಶರೀಫ್ ಟಿ ಎ ಮೊದಲಾದವರು ಉಪಸ್ಥಿತರಿದ್ದರು.
ಸಂಘಟನೆಯ ವತಿಯಿಂದ ಸೈಯದ್ ಜಸೀಲ್ ಶಾಮಿಲ್ ಇರ್ಫಾನ್ ತಂಗಳ್ ರವರನ್ನು ಗೌರವಿಸಿ ಸನ್ಮಾನಿಸಲಾಯಿತು. ಹಾಗೂ ಪ್ರಗತಿ ಲೈಟಿಂಗ್ಸ್ ಅಂಡ್ ಸೌಂಡ್ಸ್ ಮಾಲಕ ಶಾಫಿ ಪ್ರಗತಿ, ಪತ್ರಕರ್ತ ಹಸೈನಾರ್ ಜಯನಗರ ಇವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಮಸೀದಿಯ ಮುಅದ್ದೀನ್ ಹನೀಫ್ ಮದನಿ ಸ್ವಾಗತಿಸಿ ಪ್ರಸ್ತಾವಿಕ ಮಾತನಾಡಿ ಗ್ರಾಮ ಪಂಚಾಯತಿ ಸದಸ್ಯ ಮುಜೀಬ್ ಪೈಚಾರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.ಕೊನೆಯಲ್ಲಿ ಸಾವಿರಾರು ಮಂದಿ ಅನ್ನದಾನ ಸ್ವೀಕರಿಸಿದರು.
ಅಲ್ ಅಮೀನ್ ಯೂತ್ ಸೆಂಟರ್ ಪೈಚಾರ್ ಇದರ ಎಲ್ಲಾ ಪದಾಧಿಕಾರಿಗಳು ಸದಸ್ಯರು, ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಆರ್ ಬಿ ಬಶೀರ್, ಸ್ಥಳೀಯ ನೂರಾರು ಯುವಕರ ತಂಡ ಕಾರ್ಯಕ್ರಮಕ್ಕೆ ಪೂರ್ಣ ಸಹಕಾರ ನೀಡಿದರು.