ಐಪಿಎಲ್ ಮೆಗಾ ಹರಾಜು: 1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ
ಸೌದಿ ಅರೇಬಿಯಾದಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ನ ಮೆಗಾ ಹರಾಜಿನಲ್ಲಿ 13 ವರ್ಷದ ವೈಭವ್ ಸೂರ್ಯವಂಶಿ ರಾಜಸ್ಥಾನ ರಾಯಲ್ಸ್ ತಂಡಕ್ಕೆ 1.1 ಕೋಟಿ ರೂ.ಗೆ ಹರಾಜಾಗುವ ಮೂಲಕ ಆಶ್ಚರ್ಯ ಮೂಡಿಸಿದ್ದಾರೆ.
ಹರಾಜು ಆಟಗಾರರ ಪಟ್ಟಿಲ್ಲಿದ್ದ ಅತೀ ಕಿರಿಯ ಆಟಗಾರನಾಗಿ ಗುರುತಿಸಿಕೊಂಡು ಗಮನ ಸೆಳೆದಿದ್ದ ಅವರು ಕೋಟಿ ಮೊತ್ತ ದಾಟುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ವೈಭವ್ ಸೂರ್ಯವಂಶಿ ಪಂದ್ಯ ಆಡಿದರೆ ಐಪಿಎಲ್ ಇತಿಹಾಸದಲ್ಲಿ ಆಡಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಗೆಗೆ ಭಾಜನರಾಗಲಿದ್ದಾರೆ.
ಬಿಹಾರದ ವೈಭವ್ ಸೂರ್ಯವಂಶಿ ಯುಎಇಯಲ್ಲಿ ನಡೆದ ಮುಂಬರುವ 2024ರ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಅಂಡರ್-19 ಏಷ್ಯಾಕಪ್ ಗಾಗಿ ಭಾರತ ಅಂಡರ್-19 ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರು.