ರಾಷ್ಟ್ರೀಯ

ದಕ್ಷಿಣ ಭಾರತದ ಪ್ರಸಿದ್ಧ ವಾಸುದೇವ್ ಅಡಿಗಾಸ್ ಬ್ರಾಂಡ್ ಈಗ ಕೌಜಿನಾ (Kouzina) ತೆಕ್ಕೆಗೆ

ಫುಡ್ ಟೆಕ್ ಉದ್ಯಮದಲ್ಲಿ ಮುಂಚೂಣಿಯಲ್ಲಿರುವ ಕೌಜಿನಾ, ನ್ಯೂ ಸಿಲ್ಕ್ ರೂಟ್ ಪ್ರೈವೇಟ್ ಇಕ್ವಿಟಿಯಿಂದ ಐಕಾನಿಕ್ ಸೌತ್ ಇಂಡಿಯನ್ ರೆಸ್ಟೊರೆಂಟ್ ‘ವಾಸುದೇವ್ ಅಡಿಗಾಸ್ ಬ್ರ್ಯಾಂಡ್ ಅನ್ನು ಸ್ವಾಧೀನಪಡಿಸಿಕೊಂಡಿದೆ. ಈ ಸ್ವಾಧೀನದೊಂದಿಗೆ ಕೌಜಿನಾ ದಕ್ಷಿಣ ಭಾರತದಲ್ಲಿ ತ್ವರಿತ-ಸೇವಾ ರೆಸ್ಟೋರೆಂಟ್ (QSR) ವಿಭಾಗದಲ್ಲಿ ಮುಂಚೂಣಿಯಲ್ಲಿರುವ ವಾಸುದೇವ್ ಅಡಿಗಾಸ್ ಬ್ರ್ಯಾಂಡ್ ಅನ್ನು ಭಾರತದಾದ್ಯಂತ ವಿಸ್ತರಿಸಲು ಯೋಜಿಸಿದೆ.

ಕರ್ನಾಟಕದಲ್ಲಿ ಬಹುಕಾಲದಿಂದ ಮನೆಮಾತಾಗಿರುವ ಬ್ರ್ಯಾಂಡ್ ಯಾವುದು ಎಂದರೆ ಅದು ವಾಸುದೇವ್ ಅಡಿಗಾಸ್ ಬ್ರ್ಯಾಂಡ್. ರಾಮೇಶ್ವರಂ ಕೆಫೆಯಂತಹ ಹೊಸ ಸಂಸ್ಥೆ ಬರುವ ಮೊದಲು ದಕ್ಷಿಣ ಭಾರತೀಯ ಪಾಕಪದ್ಧತಿಗೆ ಹೆಸರುವಾಸಿಯಾಗಿ ಗುಣಮಟ್ಟದ ದಕ್ಷಿಣ ಭಾರತೀಯ ಆಹಾರವನ್ನು ಬಯಸುವ ಗ್ರಾಹಕರ ನೆಚ್ಚಿನ ಆಯ್ಕೆಯಾಗಿತ್ತು. ಬೆಂಗಳೂರಿನಾದ್ಯಂತ ಪ್ರಸಿದ್ಧ ದರ್ಶಿನಿ ಸಂಸ್ಕೃತಿಯ ಪ್ರವರ್ತಕರಾಗಿದ್ದ ವಾಸುದೇವ ಅಡಿಗರು ನಂಬಿಕೆ ಮತ್ತು ವಿಶ್ವಾಸಾರ್ಹತೆಯನ್ನು ಕಾಪಾಡಿಕೊಂಡು ಬರುವ ಮೂಲಕ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದ್ದರು.

ಶ್ರೀ ಕೆ.ಎನ್. ವಾಸುದೇವ್ ಅಡಿಗ ಮತ್ತು ಅವರ ತಂಡವು ನಿರ್ಮಿಸಿದ ಅದ್ಭುತ ಪರಂಪರೆ, ಅವರ ದೂರದೃಷ್ಟಿ ಮತ್ತು ಬದ್ಧತೆಯಿಂದಾಗಿ ಆಹಾರ ಉದ್ಯಮದಲ್ಲಿ ಗುಣಮಟ್ಟದ ಬ್ರ್ಯಾಂಡ್ ಆಗಿ ಹೊರಹೊಮ್ಮಿದ್ದನ್ನು ಕೌಜಿನದ ಸಹ-ಸಂಸ್ಥಾಪಕ ಮತ್ತು ಸಿಒಒ ಮಹೇಶ್ ಮಡಿಯಾಲ ಅವರು ಶ್ಲಾಘಿಸಿದ್ದಾರೆ. “ಪ್ರಾದೇಶಿಕ ಆಹಾರದ ತಯಾರಿಕೆಯಲ್ಲಿ ಈ ಬ್ರ್ಯಾಂಡ್ ಗಮನಾರ್ಹ ಮೌಲ್ಯವನ್ನು ಹೊಂದಿದೆ. ಇಂದಿನ ಕ್ರಿಯಾತ್ಮಕ ಮಾರುಕಟ್ಟೆಯಲ್ಲಿ ಬ್ರ್ಯಾಂಡ್ಗೆ ಹೊಸ ಶಕ್ತಿಯನ್ನು ನೀಡಿ ಪರಂಪರೆಯನ್ನು ಗೌರವಿಸಲು ನಾವು ಯೋಜಿಸಿದ್ದೇವೆ. ಒಂದು ಬ್ರ್ಯಾಂಡ್ ಬಹಳ ಪ್ರಸಿದ್ಧಿ ಪಡೆಯಬೇಕಾದರೆ ದಶಕಗಳನ್ನು ತೆಗೆದುಕೊಳ್ಳುತ್ತದೆ. ನಾವು ಮೌಲ್ಯ ಮತ್ತು ಗುಣಮಟ್ಟ ಎರಡನ್ನೂ ಕಾಪಾಡಿಕೊಂಡು ಬರುವುದರ ಜೊತೆಗೆ ಬ್ರ್ಯಾಂಡ್ ಅನ್ನು ಮತ್ತಷ್ಟು ವಿಸ್ತರಿಸುತ್ತೇವೆ. ಆಹಾರ ಮತ್ತು ಪಾನೀಯ ವಿತರಣಾ ಅಗ್ರಿಗೇಟರ್ಗಳು ವ್ಯಾಪಾರದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. ಮಾರುಕಟ್ಟೆ ಸ್ಥಳಗಳ ಮೂಲಕ ಬೇಡಿಕೆಯನ್ನು ಹೆಚ್ಚಿಸುವಲ್ಲಿ ನಮ್ಮ ತಂತ್ರಜ್ಞಾನದ ಪರಿಣತಿಯು ಈ ಪ್ರಸಿದ್ಧ ಬ್ರ್ಯಾಂಡ್ ಅನ್ನು ಮತ್ತಷ್ಟು ಪುನರುಜ್ಜೀವನಗೊಳಿಸಲು ನಮಗೆ ಸಹಾಯ ಮಾಡಲಿದೆ” ಎಂದು ಹೇಳಿದರು.

“ಭಾರತೀಯ ಫಾಸ್ಟ್-ಫುಡ್ ರೆಸ್ಟೋರೆಂಟ್ಗಳ ಸರಣಿ KaatiZone ಬ್ರ್ಯಾಂಡ್ ಅನ್ನು ಪುನರುಜ್ಜೀವನ ಮಾಡಿದ್ದು ಕೌಜಿನಾಗೆ ಸಿಕ್ಕಿದ ಮೊದಲ ಯಶಸ್ಸು. ಸ್ವಾಧೀನಪಡಿಸಿ ಮತ್ತೆ ಆ ಬ್ರ್ಯಾಂಡ್ ಫೇಮಸ್ ಆಗುವ ಮೂಲಕ ಕೌಜಿನಾ ಗೆಲುವಿನ ತಂತ್ರವನ್ನು ರಚಿಸಿದೆ. ಈ ಮೂಲಕ ಪ್ರಸಿದ್ಧ ಬ್ರ್ಯಾಂಡ್ಗಳು ಮತ್ತೊಮ್ಮೆ ಬೆಳಗಲು ಅವಕಾಶ ಮಾಡಿಕೊಟ್ಟಿದೆ. ಇದಕ್ಕೆ ಹೊಸ ಸೇರ್ಪಡೆ ವಾಸುದೇವ್ ಅಡಿಗಾಸ್. ವಾಸುದೇವ್ ಅಡಿಗಾಸ್ ರೆಸ್ಟೋರೆಂಟ್ಗಳನ್ನು ಕರ್ನಾಟಕ ಮಾತ್ರವಲ್ಲದೇ ಭಾರತದಾದ್ಯಂತ ಮನೆ ಹೆಸರಾಗಿ ಮರುನಿರ್ಮಾಣ ಮಾಡುತ್ತೇವೆ. KaatiZone ನಂತಹ ಪೌರಾಣಿಕ ಬ್ರ್ಯಾಂಡ್ಗಳನ್ನು ಪುನರುಜ್ಜೀವನಗೊಳಿಸುವ ಮೂಲಕ ನಾವು ಅಪಾರವಾದ ಅನುಭವ ಪಡೆದಿದ್ದೇವೆ. ಈ ಯಶಸ್ಸಿನೊಂದಿಗೆ ನಾವು ಈ ಬ್ರ್ಯಾಂಡ್ ಅನ್ನು ಮತ್ತೆ ಜನರ ಮೆಚ್ಚುಗೆಯ ಬ್ರ್ಯಾಂಡ್ ಆಗಿ ರೂಪಿಸಬಹುದು ಎಂಬ ವಿಶ್ವಾಸ ನಮಗಿದೆ” ಎಂದು ಮಹೇಶ್ ಮಡಿಯಾಲ ತಿಳಿಸಿದರು.

ಕಾರ್ಯತಂತ್ರದ ಭಾಗವಾಗಿ ವಾಸುದೇವ್ ಅಡಿಗಾಸ್ ಬ್ರ್ಯಾಂಡ್ ವಿಸ್ತರಣೆಯಲ್ಲಿ ಪಾಲುದಾರರಾಗಲು ಕೌಜಿನಾ ಕರ್ನಾಟಕದಾದ್ಯಂತ ಫ್ರಾಂಚೈಸಿಗಳನ್ನು ಆಹ್ವಾನಿಸುತ್ತಿದೆ. ಫ್ರಾಂಚೈಸಿಗಳಿಂದ ಧನಾತ್ಮಕ ಪ್ರತಿಕ್ರಿಯೆ ಬರುತ್ತಿದ್ದು ಐಕಾನಿಕ್ ಬ್ರ್ಯಾಂಡ್ ಅನ್ನು ಅದರ ಪೂರ್ಣ ಸಾಮರ್ಥ್ಯಕ್ಕೆ ಮರಳಿ ತರಲು ನಾವು ಉತ್ಸುಕರಾಗಿದ್ದೇವೆ. ಕೌಜಿನಾ ಈ ಬ್ರ್ಯಾಂಡ್ ಅನ್ನು ಮರುಪ್ರಾರಂಭಿಸಲು ತಾಜಾ ಫ್ರಾಂಚೈಸ್ ಔಟ್ಲೆಟ್ಗಳ ಜೊತೆಗೆ ಈಗಾಗಲೇ ಅಸ್ತಿತ್ವದಲ್ಲಿರುವ ದಕ್ಷಿಣ ಭಾರತೀಯ ರೆಸ್ಟೋರೆಂಟ್ಗಳ ಆಸಕ್ತಿಯನ್ನು ಸಹ ನೋಡುತ್ತಿದ್ದೇವೆ. ತಂತ್ರಜ್ಞಾನ, ಕಾರ್ಯಾಚರಣೆ ಮತ್ತು ಬ್ರ್ಯಾಂಡ್ ನಿರ್ವಹಣೆಯಲ್ಲಿ ತನ್ನ ಪರಿಣತಿಯನ್ನು ಬಳಸಿ ಕೌಜಿನಾ ಯಶಸ್ವಿ ಫ್ರ್ಯಾಂಚೈಸ್ ಪಾಲುದಾರಿಕೆಯನ್ನು ಹೊಂದಲು ಬಯಸಿದೆ.

ದಕ್ಷಿಣ ಭಾರತದ ಆಹಾರ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸುವ ವಿಶಾಲ ಕಾರ್ಯತಂತ್ರದ ಭಾಗವಾಗಿ ಕೌಜಿನಾವು ವಾಸುದೇವ್ ಅಡಿಗಾಸ್ ಬ್ರ್ಯಾಂಡ್ ಸ್ವಾಧೀನಪಡಿಸಿಕೊಂಡಿದೆ. ನವೀನ ವಿಧಾನದೊಂದಿಗೆ ಮೂಲ ಪರಂಪರೆಯನ್ನು ಕಾಪಾಡುವುದರೊಂದಿಗೆ ದಕ್ಷಿಣ ಭಾರತೀಯ ಪಾಕಪದ್ಧತಿಯಲ್ಲಿ ಹೆಸರುವಾಸಿಯಾಗಿರುವ ವಾಸುದೇವ್ ಅಡಿಗಾಸ್ ಹೆಸರನ್ನು ದೇಶದ ಪ್ರತಿ ಮನೆಯಲ್ಲಿ ಗುನುಗವಂತೆ ಮಾಡುವ ಗುರಿಯನ್ನು ಕೌಜಿನಾ ಹಾಕಿಕೊಂಡಿದೆ.

Leave a Reply

Your email address will not be published. Required fields are marked *

error: Content is protected !!