ಕರಾವಳಿ

ಕಬಕ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಾರ್ಷಿಕ ಕ್ರೀಡೋತ್ಸವ



ಪುತ್ತೂರು: ಕಬಕ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಾರ್ಷಿಕ ಕ್ರೀಡೋತ್ವವ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಸುಧೀರ್ ಕುಮಾರ್ ರವರು ನೆರವೇರಿಸಿ ವಿದ್ಯಾರ್ಥಿ ದೆಸೆಯಲ್ಲಿ ಕ್ರೀಡೆಯ ಆಸಕ್ತಿ ಬಗ್ಗೆ ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಸಾಬಾರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳಳಿಗೆ ಪ್ರೊತ್ಸಾಹಕ ಮಾತುಗಳನ್ನಾಡಿದರು.

ಮುಖ್ಯ ಅಥಿತಿಯಾಗಿ ಪುತ್ತೂರು ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷ ರೋಟರಿ 3181ಝೊನ್ 5 ವಲಯ ಸೇನಾನಿ ಮೊಹಮ್ಮದ್ ರಫೀಕ್ ದರ್ಬೆ ಮಾತನಾಡಿ ಶಿಕ್ಷಣದೊಂದಿಗೆ ಕ್ರೀಡೆ ವಿದ್ಯಾರ್ಥಿಗಳಿಗೆ ಅತೀ ಅಗತ್ಯವಾಗಿದ್ದು ಕ್ರೀಡೆಯು ವಿದ್ಯಾರ್ಥಿಗಳಲ್ಲಿ ಮನೋ ಸಾಮರ್ಥ್ಯದೊಂದಿಗೆ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ಶ್ರಮದ ಪಾಠವನ್ನು ಕಲಿಸುತ್ತದೆ, ಉತ್ತಮ ಕ್ರೀಡಾಪಟುವಿಗೆ ಪೋಲೀಸ್ ಇಲಾಖೆ ಮತ್ತು ಮಿಲಿಟರಿ ಸೇವೆಗೆ ನಿಯುಕ್ತಿಗೊಳ್ಳಲು ಸಹಾಯವಾಗುವುದು ಆಗಿದೆ ಎಂದರು.

ಕಾರ್ಯಕ್ರಮದ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ರಶೀದ್ ಮುರ ಹಾಗೂ ಉಪನ್ಯಾಸಕರು ಉಪಸ್ತಿತರಿದ್ದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪಥಸಂಚಲನದಲ್ಲಿ ವಿದ್ಯಾರ್ಥಿಗಳ ನೇತೃತ್ವಕರಾಗಿ ಲಯನ್ ಟೀಮ್ ಮೊಹಮ್ಮದ್ ಫಯಾಜ಼್, ಆಯಿಶತ್ ರಿಫಾ, ಟೈಗರ್ ಟೀಮ್ ಮೊಹಮ್ಮದ್ ಅ೦ಝೀಲ್,ಮುಸ್ಖಾನ್, ಚಿತಾ ಟೀಮ್ ಮೊಹಮ್ಮದ್ ಅಬ್ದುಲ್ ಬಾಶಿತ್,ಆಯಿಶಾ ಬೇಗ೦, ಈಗಲ್ ಟೀಮ್ ನೇತೃತ್ವವನ್ನು ರಿಜ಼್ವಾನ್ ಮತ್ತು ಜಯಲಕ್ಷ್ಮಿ ವಹಿಸಿದರು.
ಆಂಗ್ಲ ಬಾಷಾ ಉಪನ್ಯಾಸಕರಾದ ಈಶ್ವರ ಭಟ್ ಬಿ.ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು.

ಉಪನ್ಯಾಸಕರಾದ ಶ್ರೀಧರ್ ರೈ ಕೆ‌.ಸ್ವಾಗತಿಸಿ,ನಯನಾ ಕುಮಾರಿ ವಂದಿಸಿದರು. ಶ್ರೀನಿವಾಸ ಬಡಕ್ಕಿಲಾಯ ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *

error: Content is protected !!