ಶಾಸಕರಿಗೆ ಬಿಜೆಪಿ ಹಣದ ಆಮಿಷ ವಿಚಾರ: ಅಗತ್ಯವಿದ್ದರೆ ತನಿಖೆಗೆ ಆದೇಶ-ಪರಮೇಶ್ವರ್
ಮೈಸೂರು: ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಆಡಳಿತ ಪಕ್ಷದ ಶಾಸಕರಿಗೆ ಬಿಜೆಪಿ ಹಣದ ಆಮಿಷ ಒಡ್ಡುತ್ತಿದೆ ಎಂಬ ಕಾಂಗ್ರೆಸ್ ನಾಯಕರ ಆರೋಪಗಳ ಬಗ್ಗೆ ಗೃಹ ಸಚಿವ ಜಿ ಪರಮೇಶ್ವರ್ ಪ್ರತಿಕ್ರಿಯಿಸಿದ್ದು ಅಗತ್ಯವಿದ್ದರೆ ತನಿಖೆಗೆ ಆದೇಶಿಸುತ್ತೇವೆಂದು ಹೇಳಿದ್ದಾರೆ.
ಪ್ರತಿಪಕ್ಷಗಳ ಆಗ್ರಹ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ತನಿಖೆ ಎಂಬುದು ಮಕ್ಕಳ ಆಟವಲ್ಲ, ಆಮಿಷ ವಿಚಾರ ಕುರಿತು ಅಗತ್ಯಬಿದ್ದರೆ ತನಿಖೆಗೆ ಆದೇಶಿಸಲು ಸರ್ಕಾರ ಸಿದ್ಧವಿದೆ, ಅಂತಹ ಸಂದರ್ಭ ಬಂದರೆ ತನಿಖೆಗೆ ಆದೇಶಿಸುತ್ತೇವೆಂದು ಹೇಳಿದರು.
ಇದೇ ವೇಳೆ 50 ಕಾಂಗ್ರೆಸ್ ಶಾಸಕರಿಗೆ ಬಿಜೆಪಿಯಿಂದ ತಲಾ 50 ಕೋಟಿ ರೂ.ಗಳ ಆಫರ್ ಬಂದಿದೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡ ಗೃಹ ಸಚಿವರು, ಇಂತಹ ಪ್ರಯತ್ನಗಳು ನಡೆಯುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ ಎಂದು ತಿಳಿಸಿದರು.