ಕರಾವಳಿ

25 ಜನರಿಂದ ಆರಂಭಗೊಂಡ ದೀಪಾವಳಿ ವಸ್ತ್ರ ವಿತರಣೆ ಇಂದು 75 ಸಾವಿರ ಜನರಿಗೆ ವಿತರಣೆ ಮಾಡುವ ಹಂತಕ್ಕೆ ಬಂದಿದೆ- ಅಶೋಕ್ ರೈ



ಪುತ್ತೂರು: 25 ಜನರಿಗೆ ವಸ್ತ್ರದಾನ ಮಾಡುವ ಮೂಲಕ ಪ್ರಾರಂಭವಾದ ದೀಪಾವಳಿ ವಸ್ತ್ರ ವಿತರಣಾ ಕಾರ್ಯಕ್ರಮ ಇಂದು 75,000 ಜನರಿಗೆ ವಸ್ತ್ರ ವಿತರಣೆ ಮಾಡುವ ಹಂತಕ್ಕೆ ಬಂದಿರುವುದು ಅತೀವ ಸಂತಸ ತಂದಿದೆ. ನವೆಂಬರ್ 2ರಂದು ಕೊಂಬೆಟ್ಟು ಮೈದಾನದಲ್ಲಿ ರೈ ಎಜುಕೇಶನಲ್ & ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆಯುವ ಬೃಹತ್ ವಸ್ತ್ರ ವಿತರಣಾ ಸಮಾರಂಭದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು ಎಂದು ಟ್ರಸ್ಟ್ ನ ಮುಖ್ಯ ಪ್ರವರ್ತಕರಾದ ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.  ಅವರು ಅಕ್ಟೋಬರ್ 22ರಂದು ಪುತ್ತೂರು ಅಶ್ವಿನಿ ಹೋಟೆಲ್ ನಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.

ಈ ವರ್ಷವೂ ಮಹಿಳೆಯರಿಗೆ ಸೀರೆ ಮತ್ತು ಪುರುಷರಿಗೆ ಬೆಡ್ ಶೀಟ್ ನೀಡಲಾಗುವುದು. ಒಂದು ಮನೆಯಿಂದ ಐದು ಮಂದಿ ಬಂದರೆ ಐದು ಮಂದಿಗೂ ವಸ್ತ್ರ ನೀಡಲಾಗುತ್ತದೆ. ಅದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಈಗಾಗಲೇ ಮಾಡಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

ಈ ಬಾರಿಯ ಕಾರ್ಯಕ್ರಮಕ್ಕೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗವಹಿಸುವ ನಿರೀಕ್ಷೆಯಿದ್ದು ಒಂದೆರಡು ದಿನಗಳಲ್ಲಿ ಅವರು ಭಾಗವಹಿಸುವ ಬಗ್ಗೆ ಸ್ಪಷ್ಟತೆ ಸಿಗಲಿದೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೂ ಆಹ್ವಾನಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಜಿಲ್ಲೆಯ ವಿಧಾನಪರಿಷತ್ ಸದಸ್ಯರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ವಿದೇಶ ಪ್ರವಾಸದಲ್ಲಿರುವುದರಿಂದ ಸಭಾಪತಿ ಯು.ಟಿ ಖಾದರ್ ಅವರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದು ಅಶೋಕ್ ಕುಮಾರ್ ರೈ ಹೇಳಿದರು.

Leave a Reply

Your email address will not be published. Required fields are marked *

error: Content is protected !!