ಉಜಿರೆ: ಹೃದಯಾಘಾತದಿಂದ ಯುವಕ ನಿಧನ
ಉಜಿರೆ: ಹೃದಯಾಘಾತದಿಂದ ಯುವಕನೋರ್ವ ಮೃತಪಟ್ಟ ಘಟನೆ ನಡೆದಿದೆ. ಇಲ್ಲಿನ ಅತ್ತಾಜೆಯ ರಮೇಶ್ ಭಟ್ ಮತ್ತು ಶಾರದಾ ದಂಪತಿಯ ಪುತ್ರ ಆದಿತ್ಯ ಭಟ್ (29.ವ) ಹೃದಯಾಘಾತದಿಂದ ನಿಧನರಾದವರು.
ಅಕ್ಟೋಬರ್ 11ರಂದು ಮನೆಯಲ್ಲಿ ನಡೆಯ ಆಯುಧ ಪೂಜೆಯ ಸಂಭ್ರಮದಲ್ಲಿ ಆದಿತ್ಯ ಪೂರ್ಣವಾಗಿ ತೊಡಗಿಸಿಕೊಂಡಿದ್ದರು ಎನ್ನಲಾಗಿದೆ. ಆದಿತ್ಯಗೆ ಎದೆನೋವು ಕಾಣಿಸಿಕೊಂಡ ನಂತರ ಹೃದಯಾಘಾತವಾಗಿದೆ ಎನ್ನಲಾಗಿದ್ದು ಪ್ರತಿಭಾನ್ವಿತರಾಗಿದ್ದ ಆದಿತ್ಯ ರವರು ಸಾಫ್ಟ್ ವೇರ್ ಇಂಜಿನಿಯರ್ ಆಗಿ ಜರ್ಮನಿಯಲ್ಲಿ ತನ್ನದೇ ಸ್ಟಾರ್ಟ್ ಅಪ್ ಕಂಪೆನಿ ಮುನ್ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ.