ರಾಷ್ಟ್ರೀಯ

ಹುಟ್ಟೂರಿಗೆ ಅರ್ಜುನ್ ಮೃತದೇಹ, ಮುಗಿಲು ಮುಟ್ಟಿದ ಆಕ್ರಂದನ



ಶಿರೂರು ಅಂಕೋಲಾದದಲ್ಲಿ ಲಾರಿ ಸಮೇತ ನೀರಿನಲ್ಲಿ ಕೊಚ್ಚಿ ಹೋಗಿದ್ದ ಕೇರಳದ ಲಾರಿ ಚಾಲಕ ಅರ್ಜುನ್ ಅಂತ್ಯ ಸಂಸ್ಕಾರ ಸೆ.28ರಂದು ಅವರ ಹುಟ್ಟೂರು ಕನ್ನಡಿಕಲ್‌ ನಲ್ಲಿ ನಡೆಸಲಾಯಿತು. ಪಾರ್ಥಿವ ಶರೀರವನ್ನು ಕೊಡೊಯ್ಯುವ ವೇಳೆ ಸಾವಿರಾರು ಜನರು ಆಗಮಿಸಿದ್ದರು. ಅಂತಿಮ ದರ್ಶನ ಪಡೆಯಲು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ಸಾವಿರಾರು ಜನರು ನಿಂತಿದ್ದರು.

ಪಾರ್ಥಿವ ಶರೀರ ಹೊತ್ತ ಆಂಬ್ಯುಲೆನ್ಸ್ ಕನ್ನಡಿಕಲ್ ಗ್ರಾಮಕ್ಕೆ ಪ್ರವೇಶಿಸಿದಾಗ ಹಲವರ ಭಾವುಕ ದೃಶ್ಯಗಳು ಕಂಡು ಬಂದವು. ಪತ್ನಿ, ಪುತ್ರ, ಕುಟುಂಬ ಸದಸ್ಯರು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.

Leave a Reply

Your email address will not be published. Required fields are marked *

error: Content is protected !!