ಮೇಗಿನ ಪಂಜಳ ತಾಜುಲ್ ಉಲಮಾ ಸೆಂಟರಿನಲ್ಲಿ ಮಹಳರತುಲ್ ಬದ್ರಿಯ್ಯ, ಮರ್ಹೂಂ ಕಕ್ಕಿಂಜೆ ಮೂಸಾ ಉಸ್ತಾದ್ ಅನುಸ್ಮರಣೆ
ತಲಪಾಡಿ: ಕೆ.ಸಿ.ರೋಡು ಸಮೀಪದ ಮೇಗಿನ ಪಂಜಳ ತಾಜುಲ್ ಉಲಮಾ ಸೆಂಟರ್’ನಲ್ಲಿ ಮಾಸಿಕ ಮಹಳರತುಲ್ ಬದ್ರಿಯ್ಯ ಹಾಗೂ ಹಿರಿಯ ವಿದ್ವಾಂಸರೂ ಸೂಫಿವರ್ಯರೂ ಆಗಿದ್ದ ಮರ್ಹೂಂ ಕಕ್ಕಿಂಜೆ ಎಂ.ಎಸ್.ಮೂಸಾ ಮುಸ್ಲಿಯಾರ್ (ನ.ಮ) ಅವರ ಅನುಸ್ಮರಣೆ ಹಾಗೂ ದುಆ ಮಜ್ಲಿಸ್ ಆ.22ರಂದು ನಡೆಯಿತು.
ಮಹಳರತುಲ್ ಬದ್ರಿಯ್ಯ ಮಜ್ಲಿಸ್’ಗೆ ಅಬ್ದುಲ್ ಅಝೀಝ್ ಸಖಾಫಿ ನೇತೃತ್ವ ನೀಡಿದರು. ಮೂಸಾ ಉಸ್ತಾದರ ಅನುಸ್ಮರಣೆ ಹಾಗೂ ದುಆ ಮಜ್ಲಿಸ್ ನಡೆಯಿತು. ಕಾರ್ಯಕ್ರಮದಲ್ಲಿ ರಹೀಂ ಝುಹ್ರಿ, ರಶೀದ್ ಮದನಿ, ಎಮ್ಮೆಸ್ಸೆಂ ಸಿರಾಜ್ ಮಾಸ್ಟರ್, ಮಿದ್ಲಾಜ್ ಸಅದಿ ಹಾಗೂ ಕರ್ನಾಟಕ ಮುಸ್ಲಿಂ ಜಮಾಅತ್, ಎಸ್.ವೈ.ಎಸ್, ಎಸ್ಸೆಸ್ಸೆಫ್ ನಾಯಕರು ಕಾರ್ಯಕರ್ತರು ಪಾಲ್ಗೊಂಡಿದ್ದರು. ಕಾರ್ಯಕ್ರಮದ ಕೊನೆಗೆ ತಬರ್ರುಕ್ ವಿತರಿಸಲಾಯಿತು.