ಅಂತಾರಾಷ್ಟ್ರೀಯಕರಾವಳಿ

ವಿದ್ಯಾರ್ಥಿಗಳ ದಾಖಲಾತಿ, ವೀಕ್ಷಣೆ ಮತ್ತು ಶೈಕ್ಷಣಿಕ ಸಲಹೆಗಳನ್ನು ನಿರ್ವಹಿಸುವ ವೆಬ್ ಆ್ಯಪ್ ಬಿಡುಗಡೆಗೊಳಿಸಿದ ಕಮ್ಯೂನಿಟಿ ಸೆಂಟರ್



ವಿದ್ಯಾರ್ಥಿಗಳ ದಾಖಲಾತಿ, ನಿರಂತರ ವೀಕ್ಷಣೆ ಮತ್ತು ಸಮಾಲೋಚನೆಗೆ ನೆರವಾಗಲು ವೆಬ್ ಆಪ್ಲಿಕೇಶನನ್ನು ಕಮ್ಯೂನಿಟಿ ಸೆಂಟರ್ ತಂಡವು ದುಬೈಯಲ್ಲಿ ಬಿಡುಗಡೆಗೊಳಿಸಿತು.

ಕುಂಬೋಲ್ ಅಲಿ ತಂಙಳ್  ರವರು  ಆ್ಯಪ್ ಬಿಡುಗಡೆಗೊಳಿಸಿದರು. ವಿದ್ಯಾರ್ಥಿಗಳಿಗೆ ಸೆಂಟರನ್ನು ಸಂಪರ್ಕಿಸಲು, ಶೈಕ್ಷಣಿಕ ಮಾರ್ಗದರ್ಶನ ಮತ್ತು ಮಾಹಿತಿ ಪಡೆಯಲು, ಮೌಲ್ಯಮಾಪನ, ಕೌನ್ಸಿಲಿಂಗ್ ಮತ್ತು ಪ್ರಗತಿ ಪರಿಶೀಲನೆಗೆ ಸೂಕ್ತವಾಗುವಂತೆ ವೆಬ್ ಅಪ್ಲಿಕೇಶನನ್ನು ನಿರ್ಮಿಸಲಾಗಿದೆ. ಆರಂಭದಲ್ಲಿ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳನ್ನು ಸೆಂಟರ್ ನಿರ್ವಹಿಸುತ್ತಿತ್ತು. ಈಗ ಸುಮಾರು ಎಂಟು ಸಾವಿರಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಇವರ ನಿರ್ವಹಣೆಗೆ ತಂತ್ರಜ್ಞಾನದ ಅಭಿವೃದ್ದಿಯ ಅಗತ್ಯ ಮನಗಂಡು ಈ ಅಪ್ಲಿಕೇಶನ್ ನಿರ್ಮಿಸಲಾಗಿದೆ ಎಂದು ಸೆಂಟರಿನ ಅಧ್ಯಕ್ಷರಾದ ಅಮ್ಜದ್ ಖಾನ್ ಪೊಳ್ಯ ಹೇಳಿದರು.

ಸೆಂಟರನ್ನು ರಾಜ್ಯದಾದ್ಯಂತ ವಿಸ್ತರಿಸುವ ಯೋಜನೆಯಿದ್ದು ಈಗಾಗಲೇ ಮೈಸೂರಿನಲ್ಲೂ ಸೆಂಟರಿನ ನಿರ್ಮಾಣ ಆಗಿದ್ದು ಈ ನಿಟ್ಟಿನಲ್ಲಿ ಕೇಂದ್ರೀಕೃತವಾಗಿ ಕಾರ್ಯ ನಿರ್ವಹಿಸಲು ಸೂಕ್ತವಾಗುವಂತೆ ಈ ಅಪ್ಲಿಕೇಶನ್ ಅಭಿವೃದ್ದಿಪಡಿಸಲಾಗಿದೆ ಎಂದವರು ಹೇಳಿದರು.

ದುಬೈಯಲ್ಲಿ ಅನಿವಾಸಿ ಉದ್ಯಮಿ ಅಶ್ರಫ್ ಶಾ ಮಾಂತೂರು ಅವರು ಆಯೋಜಿಸಿದ ಸರಳ ಸಮಾರಂಭದಲ್ಲಿ ಕಮ್ಯೂನಿಟಿ ರಿಸರ್ಚ್ ಎಂಡ್ ಡೆವಲಪ್ಪ್ ಮೆಂಟ್ ಫೌಂಡೇಶನ್ ನ ಕಾರ್ಯಕ್ರಮಗಳ ವಿವರಣೆ ಇರುವ ಪ್ರಸ್ತುತಿಯನ್ನು ತೋರಿಸಲಾಯಿತು. ಯು.ಎ.ಇ ಯ ಅಸ್ಗರ್ ಅಲಿ ತಂಙಲ್, ಮೊಯಿದೀನ್ ಕುಟ್ಟಿ ಹಾಜಿ, ಅಬ್ದುಲ್ ಖಾದರ್ ಬೈತಡ್ಕ. ಅಬ್ದುಲ್ ರಹಿಮಾನ್ ಅಝಾದ್, ಶರೀಫ್ ಕಾವು, ಅಬ್ದುಲ್ ಶಕೂರ್ ಮನಿಲಾ, ಅಬ್ದುಲ್ ಸಲಾಂ ಬಪ್ಪಳಿಗೆ, ಬದ್ರುದ್ದೀನ್ ಹೇಂತಾರ್, ರಝಾಕ್ ಹಾಜಿ ಮನಿಲ, ನೂರ್ ಮಹಮ್ಮದ್ ನೀರ್ಕಜೆ, ನೌಶಾದ್ ಫೈಝಿ ಸೇರಿದಂತೆ ವಿವಿಧ ಸಂಘ ಸಂಸ್ಥೆಯ ಪ್ರಮುಖರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಮ್ಯುನಿಟಿ ರಿಸರ್ಚ್ ಎಂಡ್ ಡೆವಲಪ್ಪ್ ಮೆಂಟ್ ಫೌಂಡೇಶನ್ ನ ಟ್ರಸ್ಟಿ ಶಮೀರ್ ಇಬ್ರಾಹಿಂ ಕಲ್ಲಾರೆ ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *

error: Content is protected !!