ಅಲ್ ವಹಾ ಫ್ಯಾಶನ್ ಡಿಸೈನ್ ಅಕಾಡೆಮಿ ಶುಭಾರಂಭ
ಪುತ್ತೂರು: ಅಲ್ ವಹಾ ಎಜುಕೇಶನ್ & ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಅಲ್ ವಹಾ ಫ್ಯಾಶನ್ ಡಿಸೈನ್ ಅಕಾಡೆಮಿಯು ಅ.7ರಂದು ಕುಂಡಾಜೆಯಲ್ಲಿ ಶುಭಾರಂಭಗೊಂಡಿತು.
ರಾಮಕುಂಜ ಗ್ರಾ.ಪಂ ಅಧ್ಯಕ್ಷೆ ಲಲಿತಾ ಜೆ.ಡಿ.ರವರು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು.
ಅಲ್ ವಹಾ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಕೌಶಲ್ಯ ಅಭಿವೃದ್ದಿ ತರಬೇತಿ ನಡೆಸಲು ಯೋಜನೆ ರೂಪಿಸಿ ಈ ಟ್ರಸ್ಟ್ ರೂಪಿಸಿ ಅಕಾಡೆಮಿ ಪ್ರಾರಂಭಿಸಿದ್ದು ಈಗಾಗಲೇ ಮೊದಲ ಬ್ಯಾಚ್ ವಿದ್ಯಾರ್ಥಿನಿಯರ ಕೋರ್ಸ್ ಮುಕ್ತಾಯಗೊಂಡಿದ್ದು ಅವರಿಗೆ ಪ್ರಮಾಣ ಪತ್ರವನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು.
ಟೈಲರಿಂಗ್, ಹ್ಯಾಂಡ್ ಅಂಬ್ರೊಯ್ಡರಿ, ಆರಿ ವರ್ಕ್ ಒಳಗೊಂಡ ಟೈಲರಿಂಗ್ & ಫ್ಯಾಶನ್ ಡಿಸೈನ್ ಕೋರ್ಸ್ ಗಳು, ರಿಸೈನ್ ಕ್ಯಾಲಿಗ್ರಫಿ ತರಬೇತಿ ಕೋರ್ಸ್ ಹಾಗೂ ಮಕ್ಕಳ, ಮಹಿಳೆಯರ ಡ್ರೆಸ್ ಹೊಲಿಗೆ, ಬ್ಲೌಸ್ ಡಿಸೈನ್, ಗೌನ್ ಡಿಸೈನ್, ಬುರ್ಕಾ ಡಿಸೈನ್ ಲಭ್ಯವಿದೆಯೆಂದು ಸಂಸ್ಥೆಯ ನಿರ್ದೇಶಕಿ ಫಾತಿಮತ್ ತಸ್ಲಿಮಾ ತಿಳಿಸಿದರು.
ವೇದಿಕೆಯಲ್ಲಿ ಉಪನ್ಯಾಸಕಿ ಆಯಿಷತ್ ಮಿಸ್ರಿಯಾ ಹಾಗೂ ನಫಿಸಾ ಉಪಸ್ಥಿತರಿದ್ದರು.