ಸಾರೆಪುಣಿ ಶಂಸುಲ್ ಉಲಮಾ ಯಂಗ್‌ಮೆನ್ಸ್ ಅಧ್ಯಕ್ಷರಾಗಿ ಅಶ್ರಫ್ ಸಾರೆಪುಣಿ ಆಯ್ಕೆ
ಪುತ್ತೂರು: ಶಂಸುಲ್ ಉಲಮಾ ಯಂಗಮೆನ್ಸ್ ಸಾರಪುಣಿ ಇದರ ನೂತನ ಅಧ್ಯಕ್ಷರಾಗಿ ಅಶ್ರಫ್ ಸಾರೆಪುಣಿ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಬಶೀರ್ ಡಿ.ಎ ಗಟ್ಟಮನೆ ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ಇಸ್ಮಾಯಿಲ್ ಗಟ್ಟಮನೆ, ಸಲಹೆಗಾರರಾಗಿ ಹಾಜಿ ಅಬ್ಬಾಸ್ ಮದನಿ, ಅಬ್ದುಲ್ ಶಕೂರ್ ದಾರಿಮಿ ಹಾಗೂ ಅರಬ್ಬಿ ಕುಂಞಿ ಸಾರೆಪುಣಿ ಆಯ್ಕೆಯಾದರು.
ಕೋಶಾಧಿಕಾರಿಯಾಗಿ ಇಬ್ರಾಹಿಂ ಸಾರೆಪುಣಿ, ಉಪಾಧ್ಯಕ್ಷರಾಗಿ ಉಸ್ಮಾನ್ ಸಾರಪುಣಿ, ಕಾರ್ಯದರ್ಶಿಯಾಗಿ ಹನೀಫ್ ಕೋಟ್ರಸ್, ಲೆಕ್ಕ ಪರಿಶೋಧಕರಾಗಿ ಇಕ್ಬಾಲ್ ಜಿ. ಸಾರೆಪುಣಿ ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ರಫೀಕ್ ಸಾರೆಪುಣಿ, ಶರೀಫ್ ಗಟ್ಟಮನೆ, ಇಕ್ಬಾಲ್ ಎಚ್.ಎ, ಆಸಿಫ್ ಸಾರೆಪುಣ, ತಾಜುದ್ದೀನ್ ಸಾರೆಪುಣಿ, ಸರ್ಫುದ್ದೀನ್ ಸಾರೆಪುಣಿ ಹಾಗೂ ಲತೀಫ್ ಸಾರೆಪುಣಿ ಆಯ್ಕೆಯಾದರು.