ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಅರ್ಹತೆ ಗಿಟ್ಟಿಸಿಕೊಂಡ ಉಗಾಂಡ
2024ರಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಅಚ್ಚರಿ ಎಂಬಂತೆ ಉಗಾಂಡ ತಂಡ ಅರ್ಹತೆ ಪಡೆದಿದೆ.
ಆಫ್ರಿಕಾ ವಲಯದ ಅರ್ಹತಾ ಕೂಟದಲ್ಲಿ ರವಾಂಡ ವಿರುದ್ಧ 9 ವಿಕೆಟ್ಗಳ ಗೆಲುವು ದಾಖಲಿಸುವ ಮೂಲಕ ದ್ವಿತೀಯ ಸ್ಥಾನದೊಂದಿಗೆ ಪುರುಷರ ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಬಾರಿಗೆ ಪಾಲ್ಗೊಳ್ಳುವ ಅವಕಾಶವನ್ನು ಉಗಾಂಡ ಪಡೆದಿದೆ.
ಈಗಾಗಲೇ ನಮೀಬಿಯಾ ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆದಿದೆ. ನಮೀಬಿಯಾ ಮತ್ತು ಉಗಾಂಡ ವಿರುದ್ಧ ಸೋತಿರುವ ಜಿಂಬಾಬ್ವೆ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸುವ ಅರ್ಹತೆ ಕಳೆದುಕೊಂಡಿದೆ.