ಬೆಳಂದೂರು ಈಡನ್ ಗ್ಲೋಬಲ್ ಶಾಲೆಯಲ್ಲಿ ಈಡನ್ ಗ್ಲಾಂಝ ಮಿಲಾದ್ ಸಂಭ್ರಮ
ಪುತ್ತೂರು: ಬೆಳಂದೂರು ಈಡನ್ ಗ್ಲೋಬಲ್ ಶಾಲೆಯಲ್ಲಿ ಮಿಲಾದ್ ಫೆಸ್ಟ್ ಆಚರಿಸಲಾಯಿತು. ಎಂ ಝೀಕ್ಯು ವಿಭಾಗದ ವಿದ್ಯಾರ್ಥಿ ಹುಸೇನ್ ಅಹ್ಮದ್ ಖುರಾನ್ ಪಠಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸವಣೂರು ಜುಮಾ ಮಸೀದಿಯ ಖತೀಬ್ ಅಶ್ರಫ್ ಬಾಖವಿ ಕಾರ್ಯಕ್ರಮ ಉದ್ಘಾಟಿಸಿದರು. ಬೈತಡ್ಕ ಜುಮಾ ಮಸೀದಿಯ ಮುದರ್ರಿಸ್ ಜುನೈದ್ ಸಖಾಫಿ ಪ್ರಾಸ್ತಾವಿಕ ಭಾಷಣಗೈದರು.
ಕಾರ್ಯಕ್ರಮದಲ್ಲಿ ಶಾಲಾ ಪತ್ರಿಕೆಯ ಮುಖಪುಟ ಹಾಗೂ ಕರ್ನಾಟಕ ದರ್ಶನ ಹಸ್ತಪ್ರತಿಯ ಮುಖ ಪುಟ ಬಿಡುಗಡೆ ಮಾಡಲಾಯಿತು. ಕಳೆದ ಶೈಕ್ಷಣಿಕ ವರ್ಷದಲ್ಲಿ ನಡೆದ ಜೆನಿಯೋಡೆಲ್ಮಸ್ ಎಂಬ ಸ್ಪರ್ಧಾತ್ಮಕ ಪರೀಕ್ಷೆಯ ವಿಜೇತರಿಗೆ, ಶಾಲಾ ವಿಜ್ಞಾನ ಮೇಳ ಹಬಿನೋಸ್ ಹಾಗೂ ಕಳೆದ ಶೈಕ್ಷಣಿಕ ವರ್ಷದ ಅರೇಬಿಕ್ ವಿಭಾಗದಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಆಡಳಿತ ಸಮಿತಿಯ ಅಧ್ಯಕ್ಷರಾದ ಅಶ್ರಫ್ ಶಾ ಮಾಂತೂರು ಅವರು ಕಾರ್ಯಕ್ರಮಕ್ಕೆ ಸಂದೇಶದ ಮೂಲಕ ಶುಭ ಹಾರೈಸಿದರು. ಆಡಳಿತ ಸಮಿತಿಯ ಕಾರ್ಯದರ್ಶಿ ಬಶೀರ್ ಹಾಜಿ ಅಧ್ಯಕ್ಷೀಯ ಭಾಷಣ ಮಾಡಿದರು. ಸೈಯದ್ ಹಾಮಿದುಲ್ ಹಾದಿ ತಂಙಳ್ ಮಂಜೇಶ್ವರ ದುವಾ ನೇತೃತ್ವ ನೀಡಿದರು. ನಂತರ ಮಕ್ಕಳ ವೈಭವ ಭರಿತ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಮಕ್ಕಳು ನಬಿ ಪ್ರೇಮವನ್ನು ಭಾಷಣ, ಹಾಡು, ಕಥಾ ಪ್ರಸಂಗ, ಬುರ್ಧಾ, ಕವ್ವಾಲಿ ಹಾಗೂ ದಫ್ ಮೂಲಕ ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಸಮಿತಿಯ ಸದಸ್ಯರಾದ ಅಬ್ದುಲ್ ಹಮೀದ್ ಹಾಜಿ, ಬಿ.ಪಿ ಇಸ್ಮಾಯಿಲ್ ಹಾಜಿ, ಪುತ್ತುಬಾವ ಹಾಜಿ, ಮುಸ್ತಫಾ ಸಅದಿ, ಅಬ್ಬಾಸ್ ಹಾಜಿ, ಅಬ್ದುಲ್ ಖಾದರ್ ಹಾಜಿ, ಅಲಿ ಸಅದಿ ಬಲ್ಕಾಡ್, ಮುಹಮ್ಮದ್ ಹಾಜಿ ಹಾಗೂ ಸವಣೂರು ಗ್ರಾ.ಪಂ ಸದಸ್ಯ ಅಬ್ದುಲ್ ರಝಾಕ್ ಉಪಸ್ಥಿತರಿದ್ದರು.
ಶಾಲಾ ಪ್ರಾಂಶುಪಾಲರಾದ ರಂಝಿ ಮುಹಮ್ಮದ್ ಕೆ.ಪಿ ಸ್ವಾಗತಿಸಿದರು. ಅರೇಬಿಕ್ ವಿಭಾಗದ ಮುಖ್ಯಸ್ಥರಾದ ರಶೀದ್ ಸಖಾಫಿ ವಂದಿಸಿದರು. ಶಿಕ್ಷಕಿ ಕುಮಾರಿ ಫಾತಿಮತ್ ಸನನ್ ಹಾಗೂ ಫಹಿಮಾ ಬಾನು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಪೋಷಕರು, ಊರವರು, ಎಲ್ಲಾ ಬೋಧಕ ಮತ್ತು ಬೋಧಕೇತರ ವೃಂದದವರು ಉಪಸ್ಥಿತರಿದ್ದರು.