ಕರಾವಳಿ

ನ.5ರಂದು ಪುತ್ತೂರಿನಲ್ಲಿ ನಡೆಯುವ ಅಶ್ರಫ್ ಹೆಸರಿನವರ ಸಂಗಮದಲ್ಲಿ ಭಾಗವಹಿಸುವ ಅಶ್ರಫ್ ನವರಿಗೆ 2000 ರೂ ಸಿಗುವುದು ನಿಜವೇ..?

ಪುತ್ತೂರು: ವಿವಿಧ ಕಡೆಗಳಲ್ಲಿರುವ ” ಹೆಸರಿವರು ಒಂದೆಡೆ ಸೇರುವ ಅಪೂರ್ವ ಸಂಗಮವೊಂದಕ್ಕೆ ಇದೇ ಬರುವ ನವೆಂಬರ್ 5ರಂದು ಪುತ್ತೂರು ಸಾಕ್ಷಿಯಾಗಲಿಕ್ಕಿದೆ.

ಕೇರಳದಲ್ಲಿ ಯಶಸ್ವಿ ಸಾಮಾಜಿಕ ಕೆಲಸಗಳ ಮೂಲಕ ತೊಡಗಿಸಿಕೊಂಡಿರುವ ಅಶ್ರಫ್ ಹೆಸರಿನವರ “ಅಶ್ರಫ್ ಒಕ್ಕೂಟ” ಸಂಘಟನೆ ಇದೀಗ ಕರ್ನಾಟಕದಲ್ಲಿ ಕೂಡ ಅಸ್ತಿತ್ವಗೊಂಡಿದ್ದು, ಇದರ ನೂತನ ಸಮಿತಿ ರಚನೆ ಸಭೆ ಹಾಗೂ ಸಮಾವೇಶ, ಇದೇ ಬರುವ ನವೆಂಬರ್ 5ರಂದು ಪುತ್ತೂರಿನಲ್ಲಿ ನಡೆಯಲಿದೆ.

ರಾಜ್ಯದ ವಿವಿದೆಡೆ ಇರುವ ಅಶ್ರಫ್ ಹೆಸರಿನವರನ್ನು “ಅಶ್ರಫ್ ಒಕ್ಕೂಟ ಕರ್ನಾಟಕ” ಎಂಬ ಸಂಘಟನೆಯಡಿ ಸೇರಿಸಿ, ಪರಸ್ಪರ ಪರಿಚಯಸ್ಥರನ್ನಾಗಿ ಮಾಡಿಸುವುದು ಮತ್ತು ಸಂಘಟನೆಯಡಿ ಸಾಮಾಜಿಕ ಕೆಲಸಗಳನ್ನು ಮಾಡಬೇಕೆನ್ನುವುದು ಸಂಘಟನೆಯ ಉದ್ದೇಶ ಎನ್ನಲಾಗುತ್ತಿದೆ.

ಜಗತ್ತಿನಲ್ಲಿ ಅಶ್ರಫ್ ಎನ್ನುವ ಹೆಸರು ಅತೀ ಹೆಚ್ಚು ಇದ್ದು ಅಶ್ರಫ್ ಹೆಸರಿಗೆ ತನ್ನದೇ ಆದ ಪ್ರತೀತಿ ಇದೆ. ಹಾಗಾಗಿ ಅವರೆಲ್ಲರನ್ನೂ ಸಮಾಜ ಸೇವೆಗೆ ಪರಿಚಯಿಸುವ ಗುರಿಯನ್ನು ಸಂಸ್ಥೆಯವರು ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

ಈತನ್ಮಧ್ಯೆ ಅಶ್ರಫ್ ಒಕ್ಕೂಟದ ಸಭೆಯಲ್ಲಿ ಭಾಗವಹಿಸಿದವರಿಗೆ ರೂ.2000 ನೀಡಲಾಗುತ್ತದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಇದಕ್ಕೂ ಸಂಘಟಕರಿಗೂ ಯಾವುದೇ ಸಂಬಂಧವಿಲ್ಲ ಮತ್ತು 2000 ರೂ ನೀಡುವ ವಿಚಾರವೇ ಒಕ್ಕೂಟದಲ್ಲಿ ಇಲ್ಲ ಹಾಗಾಗಿ ಅದನ್ನು ಯಾರೂ ನಂಬಬೇಡಿ ಎಂದು ಮುಖಂಡರು ಸ್ಪಷ್ಟಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!