ಮಂಚಿ ವಲಯ ಮಟ್ಟದ ಕ್ರೀಡಾಕೂಟ: ಮಂಚಿ ಕುಕ್ಕಾಜೆ ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ
2023-24ನೇ ಶೈಕ್ಷಣಿಕ ವರ್ಷದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಕ್ರೀಡಾಕೂಟವು ಸರಕಾರಿ ಪ್ರೌಢ ಶಾಲೆ ಮಂಚಿ ಇಲ್ಲಿ ನಡೆಯಿತು.
ಕ್ರೀಡಾಕೂಟದಲ್ಲಿ 17ರ ವಯೋಮಿತಿ ಯ ಬಾಲಕಿಯರ ವಿಭಾಗದಲ್ಲಿ , ಸಮೀಕ್ಷ -ಉದ್ದ ಜಿಗಿತ ಪ್ರಥಮ, ತ್ರಿವಿಧ ಜಿಗಿತ ಪ್ರಥಮ, 100 ಮೀಟರ್ ಅಡೆತಡೆ ಓಟ ದ್ವಿತೀಯ ಸ್ಥಾನದೊಂದಿಗೆ ಬಾಲಕಿಯರ ವಿಭಾಗದ ವೈಯಕ್ತಿಕ ಚಾಂಪಿಯನ್ ಪಡೆದುಕೊಂಡರು.
ಆಯಿಷತ್ ಅಸ್ಪಾನ 800 ಮೀಟರ್ ಓಟ ಪ್ರಥಮ, ಬಿ ಫಾತಿಮಾ ತ್ರಿವಿಧ ಜಿಗಿತ ದ್ವಿತೀಯ, ಹಲಿಮತ್ತುನ್ನಾಝಿಯ ಗುಂಡು ಎಸೆತ ದ್ವಿತೀಯ,ಆಯಿಷತ್ ನಾಫೀಲ ಜಾವೆಲಿನ್ ತೃತೀಯ,ಹ್ಯಾಮರ ಎಸೆತ ತೃತೀಯ. ಕೀರ್ತನ,ಸಮೀಕ್ಷಾಬಿಫಾತಿಮಾ, ಆಯಿಷತ್ ಅಸ್ಪಾನ ಬಾಲಕಿಯರ ರಿಲೇ ತೃತೀಯ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಸರಕಾರಿ ಪ್ರೌಢಶಾಲೆ, ಮಂಚಿ ಕುಕ್ಕಾಜೆ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀನಿವಾಸ್ ನಾಯ್ಕ್ , ಶಾಲಾ ಅಭಿವೃದ್ಧಿ ಸಮಿತಿ ಹಾಗೂ ಶಿಕ್ಷಕ ವೃಂದ ವಿದ್ಯಾರ್ಥಿಗಳನ್ನುಹಾಗೂ ತರಬೇತುಗೊಳಿಸಿದ ದೈಹಿಕ ಶಿಕ್ಷಣ ಶಿಕ್ಷಕಿಯಾದ ವಿನೋದಕುಮಾರಿ ಇವರನ್ನು ಅಭಿನಂದಿಸಿ ಶುಭ ಹಾರೈಸಿದರು.