ಸೌಜನ್ಯಾ ತಾಯಿಯ ಬಗ್ಗೆ ಅಕ್ಷೇಪಾರ್ಹ ಸಂದೇಶ: ವ್ಯಕ್ತಿಯ ವಿರುದ್ದ ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲು
ಬಂಟ್ವಾಳ: ಸಾಮಾಜಿಕ ಜಾಲತಾಣ (ಫೇಸ್ಬುಕ್) ನಲ್ಲಿ ಧರ್ಮಸ್ಥಳದಲ್ಲಿ ಹತ್ಯೆಯಾದ ಸೌಜನ್ಯಾ ಅವರ ತಾಯಿಯನ್ನು ಉದ್ದೇಶಿಸಿ ಅಕ್ಷೇಪಾರ್ಹ ಬರವಣಿಗೆಯನ್ನು (ಕಮೆಂಟ್) ಹಾಕಿರುವ ವ್ಯಕ್ತಿಯೋರ್ವರ ವಿರುದ್ದ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ರಾಘವೇಂದ್ರ ಭಟ್ ಎಂಬವರು ಧರ್ಮಸ್ಥಳದಲ್ಲಿ ಹತ್ಯೆಯಾದ ಸೌಜನ್ಯಾ ಎಂಬವರ ತಾಯಿಯನ್ನು ಉದ್ದೇಶಿಸಿ ಅಕ್ಷೇಪಾರ್ಹ ಬರವಣಿಗೆಯನ್ನು (ಕಮೆಂಟ್) ಹಾಕಿರುವುದು ಕಂಡುಬಂದ ಮೇರೆಗೆ ಆ.28 ರಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ ನಂಬ್ರ 85/2023 ಕಲಂ: 509 ಐ ಪಿ ಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.