ಗ್ರೈಂಡರ್ ಗೆ ಸಿಲುಕಿ ಯುವಕ ಸಾವು
ಗ್ರೈಂಡರ್ ಗೆ ಕೈ ಸಿಲುಕಿ ಯುವಕನೊಬ್ಬ ಸಾವನ್ನಪ್ಪಿರುವ ದಾರುಣ ಘಟನೆ ಮುಂಬೈನ ವರ್ಲಿಯಾ ಆದರ್ಶ್ ನಗರದಲ್ಲಿ ನಡೆದಿದೆ.

ಜಾರ್ಖಂಡ್ ನ 19 ವರ್ಷದ ಸೂರಜ್ ನಾರಾಯಣ್ ಯಾದವ್ ಎಂಬುವ ಯುವಕ ರಸ್ತೆ ಬದಿಯ ಚೈನೀಸ್ ಫುಡ್ ಸ್ಟಾಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಎಂದಿನಂತೆ ಗ್ರೈಂಡರ್‌ಗೆ ಖಾರ ಹಾಕಿ ಕಡೆಯುತ್ತಿದ್ದಾಗ ಒಮ್ಮೆಲೆ ಗ್ರೈಂಡರ್‌ನ ಚಕ್ರಕ್ಕೆ ಕೈ ಸಿಲುಕಿ ಕೊಂಡಿದೆ. ನಂತರ ಪೂರ್ಣ ಪ್ರಮಾಣದಲ್ಲಿ ಯುವಕನನ್ನು ಗ್ರೈಂಡರ್ ಎಳೆದುಕೊಂಡಿದೆ ಇದರಿಂದ ಯುವಕ ಸಾವನ್ನಪ್ಪಿದ್ದಾನೆ. ಹೋಟೆಲ್ ಮಾಲಿಕನ ವಿರುದ್ದ ದಾವರ್ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.