‘ಈ ಸರ್ತಿ ಏರೇ ಆವಾಡ್, ಎಂಕ್ಲೆನ ದೃಷ್ಟಿ ಒಂಜೇ..ಕೈ ಕಾಂಗ್ರೆಸ್
ಶಕುಂತಳಾ ಶೆಟ್ಟಿಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿ ಮಹಿಳಾ ಕಾಂಗ್ರೆಸ್ ಪತ್ರಿಕಾಗೋಷ್ಠಿ ನಡೆಸಿದ ಬೆನ್ನಲ್ಲೇ ಶಕುಂತಳಾ ಶೆಟ್ಟಿಯವರ ಭಾಷಣದ ತುಣುಕು ವೈರಲ್
ಪುತ್ತೂರು ಕ್ಷೇತ್ರದಲ್ಲಿ ಶಕುಂತಳಾ ಶೆಟ್ಟಿಯವರಿಗೆ ಅವಕಾಶ ನೀಡದಿದ್ದಲ್ಲಿ ಸಾಮೂಹಿಕ ರಾಜೀನಾಮೆಯ ಎಚ್ಚರಿಕೆಯನ್ನು ನೀಡಿ ಮಹಿಳಾ ಕಾಂಗ್ರೆಸ್ ನಾಯಕಿಯರು ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಬೆನ್ನಲ್ಲೇ
ಕರಾವಳಿ ಪ್ರಜಾಧ್ವನಿ ಯಾತ್ರೆಯಲ್ಲಿ ಪುತ್ತೂರು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರು ಮಾಡಿದ ಭಾಷಣವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

“ಈ ಸರ್ತಿ ಏರೇ ಆವಾಡ್ ಪದ್ನಾಲ್ ಜನ ಎಂಕ್ಲೊ ಒಟ್ಟುಗು ಉಳ್ಳ, ನಿಗ್‌ಳ್ ತರೆ ಬೆಚ್ಚ ಮಲ್ಪೊಚ್ಚಿ..ಎಂಕ್ಲೆನ ದೃಷ್ಟಿ ಒಂಜೇ ಕೈ ಕಾಂಗ್ರೆಸ್ ಜೈ” ಎಂದು ಶಕುಂತಳಾ ಶೆಟ್ಟಿ ಮಾಡಿರುವ ಭಾಷಣ ಇದೀಗ ವೈರಲ್ ಆಗುತ್ತಿದೆ.
ನಮಗೆ ಪಕ್ಷ ಮುಖ್ಯ ಎಂದು ಶಕುಂತಳಾ ಶೆಟ್ಟಿಯವರು ಹೇಳಿಕೊಂಡಿರುವಾಗ ಇತರ ಮಹಿಳಾ ನಾಯಕಿಯರು ಅವರ ಪರವಾಗಿ ಬ್ಯಾಟಿಂಗ್ ಮಾಡುತ್ತಿರುವುದೇಕೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರುವಾಗಿದೆ.
ಪುತ್ತೂರು ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ ಅಸಮಾಧಾನದ ಹೊಗೆಯಾಡುತ್ತಿದ್ದು ಎಲ್ಲಿಗೆ ಬಂದು ನಿಲ್ಲಲಿದೆ ಎಂದು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.