ಸುಳ್ಯ: ನದಿಯಲ್ಲಿ ಪತ್ತೆಯಾದ ಅಪರಿಚಿತ ಶವವನ್ನು ಮೇಲೆತ್ತಲು ಸಹಕರಿಸಿದ ಪೈಚಾರು ಈಜು ತಜ್ಞರ ತಂಡ
ಸುಳ್ಯ: ಆ. 13ರಂದು ಸಂಜೆ ಸುಳ್ಯದ ಪಾಲಡ್ಕ ಪಯಸ್ವಿನಿ ನದಿಯಲ್ಲಿ ಕಂಡು ಬಂದ ಅಪರಿಚಿತ ಮೃತದೇಹವನ್ನು ಮೇಲೆತ್ತಲು ಸುಳ್ಯದ ಪೈಚಾರಿನ ಈಜು ತಜ್ಞರ ತಂಡದ ಸದಸ್ಯರು ಸಹಕರಿಸಿದ್ದಾರೆ. ಇದೀಗ ಮೃತ ದೇಹವನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು ಘಟನೆಯ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ತಂಡದಲ್ಲಿ ಸದಸ್ಯರುಗಳಾದ ಆರ್ ಬಿ ಬಶೀರ್, ಅಬ್ಬಾಸ್ ಶಾಂತಿನಗರ, ಶಿಯಾಬ್ ಬೆಟ್ಟಂಪಾಡಿ, ನೂರುದ್ದೀನ್, ಶಾರಿಕ್, ಅಶ್ರಫ್ ಅಚ್ಛಪ್ಪು, ಹಾರಿಸ್, ಸವಾದ್ ಮೊದಲಾದವರು ಪಾಲ್ಗೊಂಡಿದ್ದರು.
ಪೈಚಾರಿನ ಈಜು ತಜ್ಞರ ತಂಡದ ಸದಸ್ಯರು ಇದಕ್ಕೂ ಮುನ್ನ ಸುಳ್ಯ, ಪುತ್ತೂರು,ಮಡಿಕೇರಿ ಮತ್ತು ಹೊರ ಜಿಲ್ಲೆಗಳಲ್ಲಿಯೂ ಕೂಡ ಈ ರೀತಿಯ ಮೃತ ದೇಹಗಳನ್ನು ನದಿ ಕೊಳ ಬಾವಿಗಳಿಂದ ಮೇಲೆತ್ತುವ ಕಾರ್ಯಗಳ ಮೂಲಕ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿದೆ.