ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿಗೆ ಗಲ್ಫ್ ಪ್ರತಿನಿಧಿಗಳ ಭೇಟಿ
ಪುತ್ತೂರು: ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಶಿಕ್ಷಣ ಸಂಸ್ಥೆಗೆ ಶಾರ್ಜಾ, ಬಹ್ರೈನ್, ಯುಎಇ ಪ್ರತಿನಿಧಿಗಳು ಭೇಟಿ ನೀಡಿ ಸಂಸ್ಥೆಯ ಕಾರ್ಯಾಚರಣೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಬಳಿಕ ನಡೆದ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ಉಪ ಪ್ರಾಂಶುಪಾಲ ಜಲೀಲ್ ಸಖಾಫಿ ಜಾಲ್ಸೂರು, ಸಂಸ್ಥೆಯ ಮುಂದೆ ಹತ್ತಾರು ಯೋಜನಗಳ ಕನಸು ಬಾಕಿ ಇದ್ದು, ಅದನ್ನು ಸಾಕಾರಗೊಳಿಸಲು ಅನಿವಾಸಿ ಮಿತ್ರರು ಸಹಕರಿಸಬೇಕೆಂದು ವಿನಂತಿಸಿದರು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅರಿಯಡ್ಕ ಅಬ್ದುರ್ರಹ್ಮಾನ್ ಹಾಜಿ ಸಂಸ್ಥೆಯ ಹಿನ್ನೆಲೆ ಮತ್ತು ನಡೆದುಬಂದ ದಾರಿಯ ಬಗ್ಗೆ ವಿವರಿಸಿದರು. ಜೊತೆ ಕಾರ್ಯದರ್ಶಿ ಅಡ್ವೊಕೇಟ್ ಶಾಕಿರ್ ಹಾಜಿ ಮಿತ್ತೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗಲ್ಫ್ ಪ್ರತಿನಿಧಿಗಳಾದ ಶುಕೂರ್ ಹಾಜಿ ಮಣಿಲ, ರಝಾಕ್ ಹಾಜಿ ಮಣಿಲ, ಇಸ್ಮಾಯಿಲ್ ಮದನಿ ನಗರ, ನಿಝಾಂ ಮಂಗಳಪದವು, ರಫೀಕ್ ಮಿತ್ತೂರು, ಮುಹಮ್ಮದ್ ಕುಂಞಿ ಹಾಜಿ ಈಶ್ವರಮಂಗಲ, ಸಾದಿಕ್ ಇಮ್ದಾದಿ ಈಶ್ವರಮಂಗಲ, ಖಲಂದರ್ ಕಕ್ಕೆಪದವು ಬಹ್ರೈನ್, ಸಯ್ಯದ್ ಭಾಯ್ ಪೆರ್ಲ ಉಪಸ್ಥಿತರಿದ್ದರು. ಸಂಸ್ಥೆಯ ಮ್ಯಾನೇಜರ್ ಉಮರ್ ಅಮ್ಜದಿ ಸ್ವಾಗತಿಸಿ ವಂದಿಸಿದರು.