ಅಂಗಡಿ ಬಾಗಿಲು ಮುರಿದು ಬಾಳೆ ಗೊನೆ ಕದ್ದು ತಿಂದ ಆನೆ
ಆನೆಯೊಂದು ಅಂಗಡಿಯೊಂದರ ಬಾಗಿಲು ಮುರಿದು ಬಾಳೆಗೊನೆ ಕದ್ದು ತಿಂದಿರುವ ಘಟನೆ ವರದಿಯಾಗಿದೆ. ಪುಣಜನೂರು ಸಮೀಪದ ತಮಿಳುನಾಡಿನ ಅಸನೂರಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಅಡ್ಡಗಟ್ಟುತ್ತಿದ್ದ ಕಾಡಾನೆ ಇದೀಗ ದಿನಸಿ ಅಂಗಡಿಯ ಬಾಗಿಲು ಮುರಿದು ಬಾಳೆಗೊನೆ ತಿಂದಿದ್ದು ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ.

ಅಸನೂರಿನ ವೆಂಕಟೇಶ್ ಎಂಬುವರ ದಿನಸಿ ಅಂಗಡಿಯ ಶಟರ್ ಮುರಿದ ಆನೆಯೊಂದು ಬಾಳೆಗೊನೆಯನ್ನು ಎತ್ತಿಕೊಂಡು ತಿಂದಿದ್ದು, ಟೊಮೆಟೊ ತರಕಾರಿಯನ್ನು ಕೂಡಾ ತಿಂದಿದೆ. ಆನೆ ದಾಳಿಯಿಂದ ಎಚ್ವೆತ್ತ ಜನರು ಆನೆಯನ್ನು ಓಡಿಸಿದ್ದಾರೆ. ಸದ್ಯ, ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದು ಸಿಸಿಟಿವಿಯಲ್ಲೂ ಆನೆ ದಾಂಧಲೆ ಸೆರೆಯಾಗಿದೆ.