ಕ್ರೈಂರಾಷ್ಟ್ರೀಯ

ಎನ್‌ಸಿಸಿ ವಿದ್ಯಾರ್ಥಿಗಳ ಮೇಲೆ ಅಮಾನುಷ ರೀತಿಯ ಹಲ್ಲೆ: ಆಘಾತಕಾರಿ ವಿಡಿಯೋ ವೈರಲ್



ಹಿರಿಯ ವಿದ್ಯಾರ್ಥಿಗಳು ಜೋಶಿ ಬೇಡೇಕರ್ ಕಾಲೇಜಿನ ನ್ಯಾಷನಲ್ ಕೆಡೆಟ್ ಕಾರ್ಪ್ಸ್(ಎನ್‌ಸಿಸಿ) ವಿದ್ಯಾರ್ಥಿಗಳನ್ನು ಅಮಾನುಷವಾಗಿ ಥಳಿಸುತ್ತಿರುವ ಆಘಾತಕಾರಿ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಹಲ್ಲೆ ನಡೆಸಿ ಕ್ರೌರ್ಯ ಮೆರೆದ ವ್ಯಕ್ತಿ ವಿರುದ್ಧ ಕ್ರಮಕ್ಕೆ ಜನರು ಒತ್ತಾಯಿಸಿದ್ದಾರೆ.

ವಿಡಿಯೊದಲ್ಲಿ, ಎಂಟು ಯುವಕರು ಕೆಸರಿನಲ್ಲಿ ತಲೆ ನೆಲಕ್ಕೆ ಹಾಕಿ ಕೈಗಳನ್ನು ಹಿಂದಕ್ಕೆ ಕಟ್ಟಿ ಕುಳಿತಿದ್ದಾರೆ. ಯುವಕರನ್ನು ಒಬ್ಬ ವ್ಯಕ್ತಿ ಕೋಲಿನಿಂದ ರಭಸವಾಗಿ ಹೊಡೆಯುವುದನ್ನು ನೋಡಬಹುದಾಗಿದೆ. ಅಪರಿಚಿತ ವಿದ್ಯಾರ್ಥಿಯೊಬ್ಬ ಈ ಆಘಾತಕಾರಿ ಕೃತ್ಯದ ವಿಡಿಯೊ ರೆಕಾರ್ಡ್ ಮಾಡಿದ್ದಾರೆ ಎನ್ನಲಾಗಿದೆ.

ಕಾಲೇಜಿನಲ್ಲಿ ಸುಮಾರು 40 ವರ್ಷಗಳಿಂದ ಇಲ್ಲಿ ಎನ್‌ಸಿಸಿ ತರಬೇತಿ ನಡೆಯುತ್ತಿದ್ದು, ಬೋಧಕರ ಅನುಪಸ್ಥಿತಿಯಲ್ಲಿ ಈ ಘಟನೆ ನಡೆದಿದೆ. ಘಟನೆ ವೈರಲ್ ಆಗುತ್ತಿದ್ದಂತೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *

error: Content is protected !!