ಕರಾವಳಿ

ಕುಂಬ್ರದಲ್ಲಿ ಹನಿಬೀ ಅಲ್ ಬಿರ್ರ್ ಪ್ರೀ-ಸ್ಕೂಲ್‌ನ ಕಚೇರಿ ಉದ್ಘಾಟನೆ-ದಾಖಲಾತಿಗೆ ಚಾಲನೆ

ಪುತ್ತೂರು: ಕುಂಬ್ರದ ಎಂ.ಎಚ್ ಆರ್ಕೇಡ್‌ನಲ್ಲಿ ಆರಂಭಗೊಳ್ಳಲಿರುವ ಹನಿಬೀ ಅಲ್ ಬಿರ್ರ್ ಪ್ರೀ-ಸ್ಕೂಲ್ ಇದರ ಕಚೇರಿ ಉದ್ಘಾಟನೆ ಮಾ.24ರಂದು ನಡೆಯಿತು.

ಈಶ್ವರಮಂಗಲ ಖತೀಬ್ ಸಯ್ಯದ್ ಜಲಾಲುದ್ದೀನ್ ತಂಙಳ್ ಅಲ್ ಬುಖಾರಿ ಅವರು ಕಚೇರಿಯನ್ನು ಉದ್ಘಾಟಿಸಿ ದುವಾಶೀರ್ವಚನ ನೀಡಿದರು. ಸಯ್ಯಿದ್ ಅಫಾಮ್ ತಂಙಳ್, ಮೇನಾಲ ಮಧುರಾ ಇಂಟರ್‌ನ್ಯಾಶನಲ್ ಸ್ಕೂಲ್‌ನ ನಿರ್ದೇಶಕ ಅಬ್ದುಲ್ ರಹಿಮಾನ್ ಹಾಜಿ ಮೇನಾಲ, ಕೆದಂಬಾಡಿ ಗ್ರಾ.ಪಂ ಸದಸ್ಯ ಮೆಲ್ವಿನ್ ಮೊಂತೆರೋ, ಮಧುರಾ ಸ್ಕೂಲ್‌ನ ಪ್ರಾಂಶುಪಾಲ ರಾಜೀಶ್ ಕುಮಾರ್ ಮೊದಲಾದವರು ಸಮಯೋಚಿತವಾಗಿ ಮಾತನಾಡಿದರು.

ಮಧುರಾ ಎಜುಕೇಶನಲ್ ಟ್ರಸ್ಟ್‌ನ ಅಧ್ಯಕ್ಷ ಹನೀಫ್ ಮಧುರಾ ಮಾತನಾಡಿ ಕುಂಬ್ರದಲ್ಲಿ ಪ್ರಾರಂಭಗೊಳ್ಳಲಿರುವ  ಹನಿಬೀ ಅಲ್ ಬಿರ್ರ್ ಪ್ರೀ-ಸ್ಕೂಲ್ ಸುವ್ಯವಸ್ಥಿತವಾಗಿ ಕಾರ್ಯಾಚರಿಸಲಿದ್ದು ಗುಣಮಟ್ಟ ಹಾಗೂ ಮೌಲ್ಯಯುತ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಲಿದೆ ಎಂದು ಹೇಳಿದರು.



ಉದ್ಯಮಿ ಮಮ್ಮಾಲಿ ಹಾಜಿ ಬೆಳ್ಳಾರೆ, ಕುಂಬ್ರ ವರ್ತಕರ ಸಂಘದ ಅಧ್ಯಕ್ಷ ಪಿ.ಕೆ ಮುಹಮ್ಮದ್ ಕೂಡುರಸ್ತೆ, ಇಸ್ಮಾಯಿಲ್ ಈಶ್ವರಮಂಗಲ, ಇ.ಎ ಮುಹಮ್ಮದ್ ಕುಂಞಿ, ಮಧುರಾ ಸ್ಕೂಲ್‌ನ ಮ್ಯಾನೇಜರ್ ಅಬ್ದುಲ್ ರಹಿಮಾನ್, ನಿರ್ದೇಶಕ ಹಾರಿಸ್ ಬಿ.ಎಸ್, ಪತ್ರಕರ್ತ ಯೂಸುಫ್ ರೆಂಜಲಾಡಿ, ಸಾಮಾಜಿಕ ಮುಂದಾಳು ಬಶೀರ್ ಕೌಡಿಚ್ಚಾರ್ ಉಪಸ್ಥಿತರಿದ್ದರು. ಸಯ್ಯದ್ ಜಲಾಲುದ್ದೀನ್ ತಂಙಳ್ ಅಲ್ ಬುಖಾರಿ ಅವರು ವಿದ್ಯಾರ್ಥಿನಿಯೋರ್ವಳಿಗೆ ಪ್ರವೇಶ ಪತ್ರ ನೀಡುವ ಮೂಲಕ ದಾಖಲಾತಿ ಪ್ರಕ್ರಿಯೆಗೆ ಚಾಲನೆ ನೀಡಿದರು. ಅಬ್ದುಲ್ ಸಲಾಂ ಮೇನಾಲ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಸಿಬ್ಬಂದಿಗಳು ಸಹಕರಿಸಿದರು.

Leave a Reply

Your email address will not be published. Required fields are marked *

error: Content is protected !!