ಮಾತನಾಡದೆ ಇಷ್ಟು ಕಾರುಬಾರು ಮಾಡುತ್ತೀರಿ: ಯು. ಟಿ ಖಾದರ್
ಸದನದಲ್ಲಿ ದ ಕ ಜಿಲ್ಲೆಯವರು ಮಾತನಾಡುವುದು ಕಡಿಮೆ ನಾವು ಇನ್ನೊಬ್ಬರು ಮಾತನಾಡುವುದನ್ನು ಕೇಳುವುದು ಮಾತ್ರ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಸಭಾಧ್ಯಕ್ಷ ಯುಟಿ ಖಾದರ್ ಅವರಲ್ಲಿ ಹೇಳಿದರು. ‘ನೀವು ಮಾತನಾಡದೆ ಇಷ್ಟೊಂದು ಕಾರುಬಾರು ಮಾಡುತ್ತೀರಿ ಇನ್ನು ಮಾತಾಡಿದ್ರೆ ಏನು ಮಾಡಬಹುದು ಎಂದು ಯುಟಿ ಖಾದರ್ ಹೇಳಿದರು.

ನಾವಿಬ್ಬರೂ ಒಂದೇ ಕಡೆಯಿಂದ ಬಂದವರು ನೀವಲ್ಲಿ ಕುಳಿತುಕೊಂಡಿದ್ದೀರಿ, ಉಳಿದವರು ಆ ಬದಿಯಲ್ಲಿ ವಿರೋಧ ಪಕ್ಷದಲ್ಲಿ ಕೂತಿದ್ದಾರೆ ಎಂದು ಶಾಸಕರು ಹೇಳಿದರು.