ಸುಳ್ಯ: ಕೋವಿಯಿಂದ ಗುಂಡು ಹಾರಿಸಿಕೊಂಡು ಯುವಕ ಸಾವು
ಸುಳ್ಯ ತಾಲೂಕಿನ ಉಬರಡ್ಕ ಗ್ರಾಮದ ಬೆಳ್ರಂಪಾಡಿ ಎಂಬಲ್ಲಿ ಕೋವಿಯಿಂದ ಗುಂಡು ಹೊಡೆದುಕೊಂಡು ಯುವಕ ಸಾವನ್ನಪ್ಪಿದ ಘಟನೆ ನಿನ್ನೆ ನಡೆದಿದೆ.

ಸಾವಿಗೀಡಾಗಿರುವ ಯುವಕ ಅರಂತೋಡು ಗ್ರಾಮದ ರವಿ ಎಂದು ತಿಳಿದುಬಂದಿದೆ.
ಈತ ಬೆಳ್ರಂಪಾಡಿಯ ಮನೆಯೊಂದರಲ್ಲಿ ಸ್ವಲ್ಪ ಸಮಯದಿಂದ ಕೆಲಸಕ್ಕಿದ್ದು ಕುಡಿತದ ಚಟ ಹೊಂದಿದ್ದರೆನ್ನಲಾಗಿದ್ದು,
ನಿನ್ನೆ ರಾತ್ರಿ ಕೋವಿ ಹಿಡಿದು ಗುಡ್ಡಕ್ಕೆ ಹೋಗಿದ್ದ ರವಿ ಅಲ್ಲಿ ತಲೆಗೆ ಗುಂಡು ಹೊಡೆದು ಸಾವನ್ನಪ್ಪಿದರೆಂದು ತಿಳಿದುಬಂದಿದೆ. ಆತ್ಮಹತ್ಯೆ ಆಗಿರಬಹುದೆಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಸುಳ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ಪಡೆದಿದ್ದಾರೆ.