ಪುತ್ತೂರು: ಕಲ್ಲರ್ಪೆಯಲ್ಲಿ ಕಾರು-ದ್ವಿಚಕ್ರ ವಾಹನ ಡಿಕ್ಕಿ -ದ್ವಿಚಕ್ರ ವಾಹನ ಸವಾರ ಸಾವು
ಪುತ್ತೂರು: ಇಲ್ಲಿನ ಆರ್ಯಾಪು ಸಮೀಪದ ಕಲ್ಲರ್ಪೆಯಲ್ಲಿ ಮುಂಜಾನೆ ಕಾರು ಹಾಗು ದ್ವಿಚಕ್ರ ವಾಹನ ಆಕ್ಟಿವಾ ನಡುವೆ ಅಪಘಾತ ಸಂಭವಿಸಿ ದ್ವಿಚಕ್ರ ವಾಹನ ಸವಾರ ನೈತಾಡಿಯ ಇಸ್ಮಾಯಿಲ್ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.

ಇಸ್ಮಾಯಿಲ್ ಬೆಳಿಗ್ಗೆ ಕಲ್ಲರ್ಪೆಯಲ್ಲಿರುವ ತಮ್ಮ ಜಮೀನಿಗೆ ಹೋಗುವ ವೇಳೆ ಈ ಅಪಘಾತ ಸಂಭವಿಸಿದೆ. ಗಂಭೀರ ಗಾಯಗೊಂಡಿದ್ದ ಇಸ್ಮಾಯಿಲ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯುವ ವೇಳೆ ದಾರಿ ಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.
ಅಪಘಾತದಿಂದ ಸ್ಕೂಟರ್ ನಜ್ಜುಗುಜ್ಜಾಗಿದೆ.ಅಪಘಾತಕ್ಕೊಳಗಾದ ಕಾರು ಮಡಿಕೇರಿ ಮೂಲದ್ದು ಎನ್ನಲಾಗಿದೆ.