ಕಾಮಗಾರಿಯ ಪಟ್ಟಿ ಕಳುಹಿಸಲು
ಬೂತ್, ವಲಯ ಅಧ್ಯಕ್ಷರುಗಳಿಗೆ ಶಾಸಕರ ಸೂಚನೆ
ಪುತ್ತೂರು: ಅನುದಾನ ಹಂಚಿಕೆ ಮಾಡುವ ಉದ್ದೇಶದಿಂದ ತಮ್ಮ ಗ್ರಾಮ ವ್ಯಾಪ್ತಿಯಲ್ಲಿ ಆಗಬೇಕಾದ ವಿವಿಧ ಕಾಮಗಾರಿಗಳ ಪಟ್ಟಿ ಕಳುಹಿಸಿಕೊಡುವಂತೆ ಬೂತ್ ಮತ್ತು ವಲಯ ಅಧ್ಯಕ್ಷರುಗಳಿಗೆ ಪುತ್ತೂರು ಶಾಸಕರಾದ ಅಶೋಕ್ ರೈಯವರು ಸೂಚನೆಯನ್ನು ನೀಡಿದ್ದಾರೆ.

ಇನ್ನೇನು ಕೆಲವೇ ದಿನಗಳಲ್ಲಿ ಅನುದಾನ ಬಿಡುಗಡೆಯಾಗಲಿದ್ದು ಅನುದಾನವನ್ನು ಹಂಚಿಕೆ ಮಾಡುವ ಉದ್ದೇಶದಿಂದ ಈಗಾಗಲೇ ಸಿದ್ದತೆಯನ್ನು ಮಾಡಿಕೊಳ್ಳಲಾಗಿದೆ. ಕಾಂಗ್ರೆಸ್ ವಲಯಾಧ್ಯಕ್ಷರುಗಳು ಮತ್ತು ಬೂತ್ ಅಧ್ಯಕ್ಷರುಗಳು ಕಾಮಗಾರಿಯ ಪಟ್ಟಿಯನ್ನು ಸಿದ್ದ ಮಾಡಿ ಶಾಸಕರ ಕಚೇರಿಗೆ ತಲುಪಿಸುವಂತೆ ಅಥವಾ ಶಾಸಕರ ಪಿ ಎ ಬಳಿ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.