ಬೋಳೋಡಿ ಎಂಆರ್‌ಎಫ್ ಘಟಕಕ್ಕೆ ಶಾಸಕರ ಭೇಟಿ, ಕಾಮಗಾರಿ ವೀಕ್ಷಣೆ
ಪುತ್ತೂರು: ಕೆದಂಬಾಡಿ ಗ್ರಾಮದ ಬೋಳೋಡಿಯಲ್ಲಿರುವ ಎಂಆರ್‌ಎಫ್ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಪುತ್ತೂರು ಶಾಸಕರಾದ ಅಶೋಕ್ ರೈ ಭೇಟಿ ನೀಡಿ ಕಾಮಗಾರಿ ಪ್ರಗತಿಪರಿಶೀಲನೆ ಮಾಡಿದರು.
ಕಾಮಗಾರಿ ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದ್ದು ಇದರ ಉದ್ಘಾಟನಾ ಕಾರ್ಯವೂ ನಡೆಯಲಿದೆ. ಅಕ್ಕಪಕ್ಕದ ಮೂರು ತಾಲೂಕುಗಳ ತ್ಯಾಜ್ಯಗಳನ್ನು ಇಲ್ಲಿ ವಿಲೇವಾರಿ ಮಾಡಿ ಅದನ್ನು ಮರುಬಳಕೆ ಮಾಡುವ ತ್ಯಾಜ್ಯ ನಿರ್ವಹಣಾ ಘಟಕ ಇದಾಗಿದ್ದು ಗ್ರಾಪಂ ಗಳ ಅನುದಾನದಿಂದ ಇಲ್ಲಿ ಘಟಕವನ್ನು ನಿರ್ಮಿಸಲಾಗಿದೆ.
ಶಾಸಕರ ಜೊತೆ ಕೆದಂಬಾಡಿ ಗ್ರಾಮದ ಕಾಂಗ್ರೆಸ್ ಪ್ರಮುಖರಾದ ಬೋಳೋಡಿ ಚಂದ್ರಹಾಸ ರೈ, ಪುರಂದರ್ ರೈ ಕೋರಿಕ್ಕಾರು, ಮೆಲ್ವಿನ್ ಮೊಂತೆರೋ, ಅಶ್ರಫ್ ಸಾರೆಪುಣಿ, ಗ್ರಾಪಂ ಸದಸ್ಯೆಯರಾದ ಅಸ್ಮಾ ಗಟ್ಟಮನೆ,ಸುಜಾತಾ ರೈ, ಸಿದ್ದಿಕ್ ಸುಲ್ತಾನ್, ಹಿದಾಯತುಲ್ಲಾ ಕಣ್ಣೂರು, ಹಬೀಬ್ ಕಣ್ಣೂರು, ಮನೋಹರ್ ರೈ ಎಂಡೆಸಾಗು,ಭಾಸ್ಕರ ಕೊಳಕೆ,ಚಿರಂಜಿತ್ ರೈ, ರೇಖಾ ನಾಯ್ಕ, ಬಾಸ್ಕರ ನಾಯ್ಕ ಬೋಳೋಡಿ, ಸೀತಾರಾಮ ರೈ ಚಾವಡಿ, ಅಬ್ದುಲ್ಲ ಗಟ್ಟಮನೆ ಮೊದಲಾದವರು ಉಪಸ್ಥಿತರಿದ್ದರು.