ಕೇರಳಕ್ಕೆ ಮುಂಗಾರು ಪ್ರವೇಶ
ಇಂದು(ಜೂ.8) ಕೇರಳಕ್ಕೆ ಮುಂಗಾರು ಪ್ರವೇಶಿಸಿದೆ. ಅದರ ಪರಿಣಾಮ ನಗರದಲ್ಲಿ ಇಂದು ಸಂಜೆ ಭಾರೀ ಮಳೆಯಾಗಿದೆ.
ಸಂಜೆಯವರೆಗೂ ಸುಡು ಬಿಸಿಲಿನಿಂದ ಕೂಡಿದ ನಗರದಲ್ಲಿ ಸಂಜೆ ಸುರಿದ ಮಳೆಯಿಂದ ತಂಪಾದ ವಾತಾವರಣ ಆಗಿದೆ.

ನಗರದ ಕಂಕನಾಡಿ, ವೆಲೆನ್ಸಿಯಾ, ಪಂಪ್‌ವೆಲ್, ಮತ್ತಿತರ ಕಡೆ ಬಿರುಸಿನ ಮಳೆಯಾಗಿದೆ. ನಗರ ಹೊರವಲಯದಲ್ಲೂ ಮಳೆಯಾಗಿದೆ. ಗ್ರಾಮಾಂತರ ಪ್ರದೇಶದ ಬಹುತೇಕ ಕಡೆಗಳಲ್ಲಿ ಮಳೆಯಾಗಿಲ್ಲ ಎಂದು ತಿಳಿದು ಬಂದಿದೆ.