ಕರಾವಳಿಕ್ರೈಂ

ಮಂಗಳೂರು: ರಾಡ್‌ನಿಂದ ಹೊಡೆದು ಯುವಕನ ಕೊಲೆ



ಮಂಗಳೂರು: ವ್ಯಕ್ತಿಯೊಬ್ಬ ತನ್ನ ಪತ್ನಿಯ ಜತೆ ಅಕ್ರಮ ಸಂಬಂಧವಿರಿಸಿಕೊಂಡಿರುವ ಸಂಶಯದಲ್ಲಿ ಯುವಕನ ಎದೆಗೆ ರಾಡ್‌ನಿಂದ ಹೊಡೆದು ಕೊಲೆಗೈದ ಘಟನೆ ಮಂಗಳೂರು ಕೂಳೂರಿನಲ್ಲಿ ಜೂ.4ರಂದು ನಡೆದಿರುವುದಾಗಿ ವರದಿಯಾಗಿದೆ.
ಪಶ್ಚಿಮ ಬಂಗಾಳದ ವಾಸುದೇವ ಗುನಿಯಾ (35.ವ) ಕೊಲೆಗೈದ ಆರೋಪಿ ಎನ್ನಲಾಗಿದ್ದು ಆತನನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ.

ಮೂಲತಃ ಪಶ್ಚಿಮ ಬಂಗಾಳದ ನಿವಾಸಿಯಾಗಿದ್ದು ಪ್ರಸ್ತುತ ಕುಳೂರಿನಲ್ಲಿ ವಾಸವಾಗಿರುವ ಬಿಕಾಸ್ ಗುನಿಯಾ (22. ವ) ಕೊಲೆಯಾದವರು.
ಕೊಲೆಯಾದ ಬಿಕಾಸ್ ಗುನಿಯಾ ಮತ್ತು ಕೊಲೆಗೈದ ವಾಸುದೇವ ಗುನಿಯಾ ಇಬ್ಬರೂ ಪಶ್ಚಿಮ ಬಂಗಳಾದವರಾಗಿದ್ದು, ಕುಳೂರಿನಲ್ಲಿ ಗಾರೆ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ವಾಸುದೇವ ಗುನಿಯಾನಿಗೆ ಬಿಕಾಸ್ ಗುನಿಯಾ ಊರಿನ ಯುವತಿಯ ಜತೆ ಹಲವು ವರ್ಷದ ಹಿಂದೆ ಮದುವೆಯಾಗಿತ್ತು. ಆತನ ಪತ್ನಿ ಪಶ್ಚಿಮ ಬಂಗಳಾದಲ್ಲೇ ವಾಸ್ತವ್ಯವಿದ್ದಳು. ಆಕೆಯ ಜತೆ ಬಿಕಾಸ್ ಗುನಿಯಾನಿಗೆ ಅಕ್ರಮ ಸಂಬಂಧವಿದೆ, ಮೊಬೈಲ್ ಮೂಲಕ ಮಾತನಾಡುತ್ತಾನೆ ಎಂಬ ಸಂಶಯ ವ್ಯಕ್ತಪಡಿಸಿದ ಆರೋಪಿಯು ಈ ವಿಚಾರದಲ್ಲಿ ಹಲವು ಬಾರಿ ಗಲಾಟೆ ಮಾಡಿದ್ದ ಎನ್ನಲಾಗಿದೆ. ಜೂ.4ರಂದು ಮಧ್ಯಾಹ್ನ ವಾಸುದೇವ ಗುನಿಯಾ ಪಾನಮತ್ತನಾಗಿ ಅಕ್ರಮ ಸಂಬಂಧದ ನೆಪದಲ್ಲಿ ಬಿಕಾಸ್ ಜತೆ ತಗಾದೆ ತೆಗೆದಿದ್ದು, ಮಾತಿಗೆ ಮಾತು ಬೆಳೆದು ಆರೋಪಿ ವಾಸುದೇವ ರಾಡ್‌ನಿಂದ ಬಿಕಾಸ್‌ನ ಎದೆಗೆ ಗುದ್ದಿದ್ದಾನೆ ಎನ್ನಲಾಗಿದೆ.‌ ಇದರಿಂದ ಗಂಭೀರ ಗಾಯಗೊಂಡ ಬಿಕಾಸ್ ಮೃತಪಟ್ಟಿದ್ದಾನೆ. ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!