ಈ ಬಾರಿಯ IPLನಲ್ಲಿ ಅಧಿಕ ವಿಕೆಟ್ ಕಬಳಿಸಿದ ಟಾಪ್-5 ಬೌಲರ್’ಗಳು ಯಾರು ಗೊತ್ತೇ..?
ಈ ಬಾರಿಯ(2023ನೇ ಸಾಲಿನ) IPLನಲ್ಲಿ ಅತ್ಯಧಿಕ ವಿಕೆಟ್ ಕಬಳಿಸಿದ ಟಾಪ್-5 ಬೌಲರ್ ಗಳ ಪಟ್ಟಿ ಈ ಕೆಳಗಿನಂತಿದೆ..

ಇನ್ನು ಈ ಟೂರ್ನಿಯಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಆಟಗಾರನಿಗೆ ನೀಡಲಾಗುವ ಪರ್ಪಲ್ ಕ್ಯಾಪ್ ಪ್ರಶಸ್ತಿಯನ್ನು ಈ ಬಾರಿ ಗುಜರಾತ್ ಟೈಟಾನ್ಸ್ ತಂಡದ ಮೊಹಮ್ಮದ್ ಶಮಿ ತನ್ನದಾಗಿಸಿಕೊಂಡಿದ್ದಾರೆ.
👉1- ಮೊಹಮ್ಮದ್ ಶಮಿ: ಗುಜರಾತ್ ಟೈಟಾನ್ಸ್ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ 17 ಪಂದ್ಯಗಳಿಂದ ಒಟ್ಟು 28 ವಿಕೆಟ್ ಕಬಳಿಸುವ ಮೂಲಕ ಈ ಬಾರಿ ಪರ್ಪಲ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ.
👉2- ರಶೀದ್ ಖಾನ್: ಗುಜರಾತ್ ಟೈಟಾನ್ಸ್ ತಂಡದ ಸ್ಪಿನ್ ಮಾಂತ್ರಿಕ ರಶೀದ್ ಖಾನ್ 17 ಪಂದ್ಯಗಳಲ್ಲಿ ಒಟ್ಟು 27 ವಿಕೆಟ್ ಕಬಳಿಸಿ ಮಿಂಚಿದ್ದಾರೆ.
👉3- ಮೋಹಿತ್ ಶರ್ಮಾ: ಗುಜರಾತ್ ಟೈಟಾನ್ಸ್ ತಂಡದ ಮೋಹಿತ್ ಶರ್ಮಾ 14 ಪಂದ್ಯಗಳಿಂದ ಒಟ್ಟು 25 ವಿಕೆಟ್ ಕಬಳಿಸಿದ್ದಾರೆ.
👉4- ಪಿಯುಷ್ ಚಾವ್ಲಾ: ಮುಂಬೈ ಇಂಡಿಯನ್ಸ್ ತಂಡದ ಹಿರಿಯ ಸ್ಪಿನ್ನರ್ ಪಿಯುಷ್ ಚಾವ್ಲಾ 16 ಪಂದ್ಯಗಳಿಂದ ಒಟ್ಟು 22 ವಿಕೆಟ್ ಪಡೆದಿದ್ದಾರೆ.
👉5- ಯುಜ್ವೇಂದ್ರ ಚಹಲ್: ರಾಜಸ್ಥಾನ್ ರಾಯಲ್ಸ್ ಪರ 14 ಪಂದ್ಯಗಳಲ್ಲಿ ಕಣಕ್ಕಿಳಿದ ಚಹಲ್ ಒಟ್ಟು 21 ವಿಕೆಟ್ ಪಡೆದು ಮಿಂಚಿದ್ದಾರೆ.