ತನ್ನ ಉದ್ಯಮ ಕ್ಷೇತ್ರದ ಜವಾಬ್ದಾರಿಯನ್ನು ಪತ್ನಿಗೆ ವಹಿಸಿಕೊಟ್ಟ ಪುತ್ತೂರು ಶಾಸಕ ಅಶೋಕ್ ರೈ
ಪುತ್ತೂರು: ಚುನಾವಣೆ ಸಂದರ್ಭದಲ್ಲಿ ಮನೆ ಮನೆಗೆ ತೆರಳಿ ಪತಿ ಅಶೋಕ್ ಕುಮಾರ್ ರೈ ಪರ ಮತಯಾಚಿಸಿ ಅವರ ಗೆಲುವಿನ ಪಾತ್ರವಾಗಿದ್ದ ಅಶೋಕ್ ಕುಮಾರ್ ರೈ ಅವರ ಪತ್ನಿ ಸುಮಾ ಎ. ರೈ ಈಗ ಪತಿ ಮುನ್ನಡೆಸುತ್ತಿದ್ದ ಉದ್ಯಮ ಕ್ಷೇತ್ರದ ಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಕೋಡಿಂಬಾಡಿ ರೈ ಎಸ್ಟೇಟ್ ಮಾಲಕರಾದ ಉದ್ಯಮಿ ಅಶೋಕ್ ಕುಮಾರ್ ರೈಯವರ ಉದ್ಯಮ, ಸಮಾಜಸೇವೆ ಮತ್ತು ಧಾರ್ಮಿಕ ಕ್ಷೇತ್ರಗಳ ಕೆಲಸ ಕಾರ್ಯಗಳಲ್ಲಿ ಕೈ ಜೋಡಿಸುತ್ತಿದ್ದ ಅವರ ಪತ್ನಿ ಸುಮಾ ಎ. ರೈ ಇದೀಗ ಪೂರ್ಣ ಪ್ರಮಾಣದಲ್ಲಿ ಉದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.