ವಿವಾಹಿತ ಮಹಿಳೆಯೊಂದಿಗೆ ಲವ್ವಿ ಡವ್ವಿ; ಯುವಕನ ಬರ್ಬರ ಹತ್ಯೆ
ಮಹಿಳೆ ಜತೆ ಅಕ್ರಮ ಸಂಬಂಧ ಹೊಂದಿದ್ದ ಯುವಕನೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಸಿಂಗ್ರಹಳ್ಳಿ ಗ್ರಾಮದಲ್ಲಿ ನಡೆದಿದೆ. ಪ್ರದೀಪ್ ಕೊಲೆಯಾದ ಯುವಕ.
ಕೊಲೆಯಾದ ಯುವಕ ಮಹಿಳೆಯೋರ್ವಳ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಎನ್ನಲಾಗಿದೆ. ಈ ವಿಷಯ ಮಹಿಳೆಯ ಗಂಡನಿಗೆ ತಿಳಿದಿದ್ದು, ಬಳಿಕ ಇದೇ ವಿಚಾರವಾಗಿ ಪೊಲೀಸರ ಸಮುನ್ನಖದಲ್ಲಿ ರಾಜೀ ಪಂಚಾಯಿತಿ ಮಾಡಲಾಗಿತ್ತು ಬುದ್ಧಿವಾದ ಹೇಳಿದ ನಂತರವೂ ಇಬ್ಬರ ಅಕ್ರಮ ಸಂಬಂಧ ಮುಂದುವರಿಸಿದ್ದರು ಎನ್ನಲಾಗಿದೆ. ಇದೇ ಕೋಪದಿಂದ ಪ್ರದೀಪ್ ನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಗೈಯಲಾಗಿದೆ ಎಂದು ತಿಳಿದುಬಂದಿದೆ.