ಕರಾವಳಿಕ್ರೈಂ

ಪುತ್ತೂರು ಶಾಸಕ ಅಶೋಕ್ ರೈ ವಿರುದ್ಧ ಯುವಕನಿಂದ ಫೇಸ್ಬುಕ್ ಖಾತೆಯಲ್ಲಿ ನಿಂದನೆ ಆರೋಪ:
ಸುಳ್ಯ ಜಯನಗರದಲ್ಲಿರುವ ಯುವಕನ ಮನೆಗೆ ತೆರಳಿದ ಶಾಸಕರ ಅಭಿಮಾನಿ ಬಳಗದ ತಂಡ ಪೋಸ್ಟ್-ಪೊಲೀಸ್ ಆಗಮನ



ಸುಳ್ಯ ಜಯನಗರ ನಿವಾಸಿ ಪ್ರಮೀತ್ ಎಂಬ ಯುವಕ ತನ್ನ ಫೇಸ್ ಬುಕ್ ಖಾತೆಯಲ್ಲಿ ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ಯವರ ಕುರಿತು ನಿಂದನಾತ್ಮಕ ಬರಹವನ್ನು ಹಂಚಿಕೊಂಡಿದ್ದಾರೆ ಎಂದು ಆರೋಪಿಸಿ ಮೇ 24 ರಂದು ರಾತ್ರಿ ಸುಮಾರು 8 ಗಂಟೆಗೆ ಪುತ್ತೂರುನಿಂದ ಶಾಸಕರ ಅಭಿಮಾನಿ ಬಳಗದ ಸುಮಾರು 15ಕ್ಕೂ ಹೆಚ್ಚು ಯುವಕರ ತಂಡ ಸುಳ್ಯ ಜಯನಗರ ಪ್ರಮೀತ್ ರವರ ಮನೆಗೆ ತೆರಳಿ ಫೇಸ್ಬುಕ್ಕಿನಲ್ಲಿ ಬರೆದ ಪೋಸ್ಟನ್ನು ಡಿಲೀಟ್ ಮಾಡುವಂತೆ ಮತ್ತು ಶಾಸಕರ ಬಳಿ ಕ್ಷಮೆ ಕೇಳುವಂತೆ ಒತ್ತಾಯಿಸಿದ್ದು,ವಿಷಯ ತಿಳಿದ ಸುಳ್ಯ ಪೊಲೀಸರು ಘಟನಾ ಸ್ಥಳಕ್ಕೆ ಬಂದು ಎರಡು ತಂಡದವರನ್ನು ಸುಳ್ಯ ಠಾಣೆಗೆ ಕರೆದುಕೊಂಡು ಹೋಗಿ ಮಾತುಕತೆ ನಡೆಸಿದ ಬಗ್ಗೆ ವರದಿಯಾಗಿದೆ.

ಫೇಸ್ಬುಕ್ ನಲ್ಲಿ ತಮ್ಮ ನಾಯಕರ ವಿರುದ್ಧ ಅವಹೇಳನಕಾರಿ ಬರಹವನ್ನು ನೋಡಿದ ಶಾಸಕರ ಅಭಿಮಾನಿ ಬಳಗದ ಯುವಕರು ಬರೆದ ವ್ಯಕ್ತಿಯನ್ನು ಕಂಡುಹಿಡಿದು ಅವರಿಗೆ ದೂರವಾಣಿ ಮೂಲಕ ಕರೆ ಮಾಡಿ ಕೂಡಲೇ ಅದನ್ನು ಡಿಲೀಟ್ ಮಾಡುವಂತೆ ಕೇಳಿಕೊಂಡಿದ್ದರು ಎನ್ನಲಾಗಿದೆ.
ಈ ಸಂದರ್ಭದಲ್ಲಿ ಪ್ರಮೀತ್ ಅವರು ನಾನು ಅದನ್ನು ಡಿಲೀಟ್ ಮಾಡುವುದಿಲ್ಲ ಎಂದು ಹೇಳಿರುವುದಾಗಿಯೂ ಈ ಸಂದರ್ಭದಲ್ಲಿ ಪರಸ್ಪರ ವಾಗ್ವಾದ ನಡೆದು ಪ್ರಮಿತ್ ರವರು ಆ ಯುವಕರನ್ನು ಧೈರ್ಯವಿದ್ದರೆ ಸುಳ್ಯದ ಜಯನಗರಕ್ಕೆ ಬರಲು ಹೇಳಿದ್ದಾರೆಂದು,ಕರೆಯನ್ನು ಸ್ವೀಕರಿಸಿದ ಪುತ್ತೂರಿನ ಯುವಕರ ತಂಡ ಸುಮಾರು 15ಕ್ಕೂ ಹೆಚ್ಚು ಮಂದಿ ಜಯನಗರದ ಪ್ರಮೀತ್ ರವರ ಮನೆಯನ್ನು ಹುಡುಕಿ ಜಯನಗರಕ್ಕೆ ಬಂದಿರುತ್ತಾರೆ ಎನ್ನಲಾಗಿದೆ.

ಪುತ್ತೂರಿನಿಂದ ಬಂದ ಯುವಕರು ಪ್ರಮಿತ್ ರವರ ಮನೆಗೆ ತೆರಳಿ ಕೂಡಲೆ ನಮ್ಮ ನಾಯಕರಾದ ಅಶೋಕ್ ರೈ ಅವರ ಬಳಿ ಕ್ಷಮೆ ಯಾಚಿಸಬೇಕು ಮತ್ತು ಫೇಸ್ಬುಕ್ಕಿನಲ್ಲಿ ಹಾಕಿರುವಂತಹ ಪೋಸ್ಟರ್ ಅನ್ನು ಡಿಲೀಟ್ ಮಾಡಬೇಕು ಎಂದು ಕೇಳಿದ್ದಾರೆ ಎನ್ನಲಾಗಿದೆ.
ಈ ಸಂದರ್ಭದಲ್ಲಿ ಪ್ರಮೀತ್ ರವರು ಅದನ್ನು ಒಪ್ಪಲಿಲ್ಲವೆಂದು ವಿಷಯ ಏಕೋಪಕ್ಕೆ ತೆರಳಿ ಮಾತಿನ ಚಕಮುಕಿ ನಡೆದು ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಯಿತು.
ಘಟನೆ ತಿಳಿದ ಸ್ಥಳೀಯ ನೂರಾರು ಮಂದಿ ಸ್ಥಳದಲ್ಲಿ ಜಮಾಯಿಸತೊಡಗಿದರು.

ಈ ವೇಳೆ ಮಾಹಿತಿ ತಿಳಿದ ಸುಳ್ಯ ಪೊಲೀಸ್ ಠಾಣಾ ಅಪರಾಧ ವಿಭಾಗದ ಉಪನಿರೀಕ್ಷಕ ಶಾಹಿದ್ ಅಫ್ರಿದಿ ಹಾಗೂ ಪೊಲೀಸರು ಸ್ಥಳಕ್ಕೆ ಬಂದು ಜನರ ಗುಂಪನ್ನು ಚದುರಿಸಿ ಪುತ್ತೂರಿನಿಂದ ಬಂದಿದ್ದ ಯುವಕರನ್ನು ಮತ್ತು ಪ್ರಮೀತ್ ರವರನ್ನು ಸುಳ್ಯ ಠಾಣೆಗೆ ಕರೆದೋಯ್ದಿದ್ದಾರೆ.
ಘಟನೆಯ ವಿವರವನ್ನು ಪಡೆದಿದ್ದ ಪುತ್ತೂರು ವಿಭಾಗದ ಡಿವೈಎಸ್ಪಿ ಡಾ. ಗಾನಾ ಪಿ ಕುಮಾರ್ ರವರು ಕೂಡಲೇ ಸುಳ್ಯ ಠಾಣೆಗೆ ಬಂದಿದ್ದು ಎರಡು ತಂಡದವರನ್ನು ವಿಚಾರಣೆ ನಡೆಸಿದ್ದು,
ಬಳಿಕ ಪ್ರಕರಣ ರಾಜಿಯಲ್ಲಿ ಇತ್ಯರ್ಥಪಡಿಸಿ ಕೊಂಡಿರುವುದಾಗಿ ತಿಳಿದುಬಂದಿದೆ.

Leave a Reply

Your email address will not be published. Required fields are marked *

error: Content is protected !!