ನಾಳೆ(ಆ.13) ಬಂಟ್ವಾಳ ಕಮ್ಯೂನಿಟಿ ಸೆಂಟರ್ ಉದ್ಘಾಟನೆ
ಬಂಟ್ವಾಳ ಕಮ್ಯೂನಿಟಿ ಸೆಂಟರ್ ಆ.13ರಂದು ಸಂಜೆ 4 ಗಂಟೆಗೆ ಬಿ.ಸಿ ರೋಡ್ ಕೈಕಂಬದಲ್ಲಿರುವ ಸುಲ್ತಾನ್ ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭಗೊಳ್ಳಲಿದೆ.

ಕೆಎಂಟಿ ಜುಬೈಲ್ ಇದರ ಸಿಇಒ ಅಬ್ದುಲ್ ರಝಾಕ್, ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ ಬಾವಾ, ಕಮ್ಯೂನಿಟಿ ರಿಸರ್ಚ್ & ಡೆವಲಪ್‌ಮೆಂಟ್ ಫೌಂಡೇಶನ್ ಇದರ ಚೇರ್‌ಮೆನ್ ಅಮ್ಜದ್ ಖಾನ್, ಇಖ್ವಾ ಫೌಂಡೇಶನ್ ಮಾಣಿ ಇದರ ಅಧ್ಯಕ್ಷ ರಹೀಂ ಸುಲ್ತಾನ್, ಹಿರಿಯ ಪತ್ರಕರ್ತ ಬಿ.ಎಂ ಹನೀಫ್, ಬರಕ ಇಂಟರ್‌ನ್ಯಾಶನಲ್ ಸ್ಕೂಲ್‌ನ ಸ್ಥಾಪಕರಾ ಮುಹಮ್ಮದ್ ಅಶ್ರಫ್, ರಾಜ್ಯ ತರಬೇತುದಾರ ರಫೀಕ್ ಮಾಸ್ಟರ್, ಡೈಮಂಡ್ ಎಜುಕೇಶನ್ ಟ್ರಸ್ಟ್‌ನ ಸಲೀಂ ಅಲ್ತಾಫ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.