ಕರಾವಳಿಜಿಲ್ಲೆ

ಪುತ್ತೂರು: ಬಡಗನ್ನೂರು ವ್ಯಾಪ್ತಿಯಲ್ಲಿ ವಿದ್ಯುತ್ ತಂತಿ ಮೇಲೆಮರ ಬಿದ್ದು ಅಪಾರ ನಷ್ಟ



ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾ.ಪಂ ವ್ಯಾಪ್ತಿಯ ಪಟ್ಟೆ, ಕೌಡಿಚ್ಚಾರ್- ಮುಡಿಪಿನಡ್ಕ ಲೋಕೋಪಯೋಗಿ ರಸ್ತೆ ಬದಿಯಲ್ಲಿದ್ದ ಅಪಾಯಕಾರಿ ಮರವೊಂದು ಮೇ. 21 ರಂದು ಗಾಳಿ, ಮಳೆಗೆ ಮುರಿದು ವಿದ್ಯುತ್ ತಂತಿಯ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಟಿ.ಸಿ ಎರಡು ಕಂಬ ಹಾಗೂ ಇತರ ಎರಡು ಕಂಬ ಸೇರಿ ಒಟ್ಟು ನಾಲ್ಕು ಕಂಬ ಮುರಿದು ಬಿದ್ದು ಮಸ್ಕಾಂ ಇಲಾಖೆಗೆ ಅಪಾರ ನಷ್ಟವಾಗಿದೆ.

ಬೆಳಗಿನ ಜಾವ 3 ತಾಸು ರಸ್ತೆ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ರಸ್ತೆ ಬದಿಯಲ್ಲಿರುವ ಅಪಾಯಕಾರಿ ಮರ ತೆರವು ಗೊಳಿಸುವಂತೆ ಅರಣ್ಯ ಇಲಾಖೆಗೆ ತಿಳಿಸಿದ್ದರೂ ಸಂಬಂಧ ಪಟ್ಟವರು ನಿರ್ಲಕ್ಷ್ಯ ಮಾಡುತ್ತಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!