ಬಿಜೆಪಿ ಸೋಲಿಗೆ ಮುಸ್ಲಿಮರ ಮೀಸಲಾತಿ ರದ್ಧತಿ ಕೂಡಾ ಕಾರಣವಾಗಿರಬಹುದು ಎಂದ ಬಿಜೆಪಿ ಶಾಸಕ
‘ಅನ್ನಭಾಗ್ಯ’ ಯೋಜನೆಯಲ್ಲಿ ನೀಡುವ ಅಕ್ಕಿಯ ಪ್ರಮಾಣ ಕಡಿಮೆ ಮಾಡಿದ್ದು, ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ, ಮುಸ್ಲಿಮರ ಮೀಸಲಾತಿ ತೆಗೆದದ್ದು ಮೊದಲಾದ ಕಾರಣಗಳಿಂದ ಬಿಜೆಪಿ ಸೋತಿರಬಹುದು’ ಎಂದು ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.

ಹಳ್ಳಿಗಳಲ್ಲಿ ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ, ಅಕ್ಕಿ ಕಡಿಮೆ ಮಾಡಿರುವ ಬಗ್ಗೆ ಮಹಿಳೆಯರು ದೂರುತ್ತಿದ್ದರು. ಹಲಾಲ್ ಕಟ್ ವಿಚಾರದಲ್ಲೂ ಜನರಿಗೆ ಕೋಪ ಇತ್ತು. ಮುಸ್ಲಿಮರ ಶೇ 4ರಷ್ಟು ಮೀಸಲಾತಿ ತೆಗೆದದ್ದು ತಪ್ಪಾಗಿರ ಬಹುದು ಎಂದು ಅವರು ತಿಳಿಸಿದರು.
ಬಿಜೆಪಿ ವಿರುದ್ಧ ಕಾಂಗ್ರೆಸ್ 40% ಕಮಿಷನ್ ಸುಳ್ಳು ಆರೋಪ ಮಾಡಿದದ್ದು ಕಾಂಗ್ರೆಸ್ ಗ್ಯಾರಂಟಿ ಕಾರ್ಡು ಸರಿಯಾಗಿ ಅನುಷ್ಠಾನಗೊಳಿಸಲು ಸಾಧ್ಯವಿಲ್ಲ ಎಂದು ಎಸ್.ಟಿ ಸೋಮಶೇಖರ್ ತಿಳಿಸಿದ್ದಾರೆ.