ಕರಾವಳಿರಾಜ್ಯ

ಹವಾಮಾನ ಆಧಾರಿತ ಬೆಳೆ ಪರಿಹಾರ ಜಿಲ್ಲೆಯ ಫಲಾನುಭವಿಗಳಿಗೆ ಮುಂದಿನ ವಾರ ಹಣ ಬಿಡುಗಡೆ: ಅಶೋಕ್ ರೈ




ಪುತ್ತೂರು: ಹವಾಮಾನ ಆಧಾರಿತ ಬೆಳೆ ವಿಮೆ ಸರಕಾರದಿಂದ ಇನ್ನೂ ಬಿಡುಗಡೆಯಾಗದ ಬಗ್ಗೆ ರಾಜ್ಯ ತೋಟಗಾರಿಕಾ ಸಚಿವರ ಜೊತೆ ಮಾತುಕತೆ ನಡೆಸಿದ ಪುತ್ತೂರು ಶಾಸಕ ಅಶೋಕ್ ರೈ ಬೆಳೆ ವಿಮೆಯನ್ನು ಶೀಘ್ರವೇ ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದರು. ಈ ಬಗ್ಗೆ ಶಾಸಕರಿಗೆ ಭರವಸೆ ನೀಡಿದ ಸಚಿವರು ಮುಂದಿನ ವಾರ ದ.ಕ ಹಾಗೂ ಉಡುಪಿ ಜಿಲ್ಲೆಗೆ ವಿಮಾ ಮೊತ್ತ ಬಿಡುಗಡೆ ಮಾಡಲಾಗುವುದು ಎಂದು ಶಾಸಕರಲ್ಲಿ ತಿಳಿಸಿದ್ದಾರೆ.


ಉಭಯ ಜಿಲ್ಲೆಯ ರೈತರು ಯಾವುದೇ ಆತಂಕ ಪಡಬೇಕಾದ ಅವಶ್ಯಕತೆಯಿಲ್ಲ ಬೆಳೆ ವಿಮಾ ಮೊತ್ತವನ್ನು ಮುಂದಿನ ವಾರ ಎಲ್ಲಾ ಫಲಾನುಭವಿ ಕೃಷಿಕರಿಗೆ ದೊರೆಯಲಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!