ಸಂಜೀವ ಮಠಂದೂರು ಅವರನ್ನು ಬದಲಾಯಿಸಲು ನಾನು ಪತ್ರ ಬರೆದಿದ್ದೆ-ಡಾ.ಎಂ.ಕೆ ಪ್ರಸಾದ್
ಪುತ್ತೂರು ಶಾಸಕ ಸಂಜೀವ ಮಠಂದೂರು ಅವರನ್ನು ಬದಲಾವಣೆ ಮಾಡಬೇಕು ಇಲ್ಲವೇ ಅವರಲ್ಲಿನ ತಪ್ಪುಗಳನ್ನು ತಿಳಿಸಿ ಸರಿಪಡಿಸಿಕೊಳ್ಳಲು ಹೇಳಬೇಕು ಎಂದು ವರ್ಷದ ಹಿಂದೆಯೇ ನಾನು ವರಿಷ್ಟರಿಗೆ ಪತ್ರ ಬರೆದಿದ್ದೆ. ಪುತ್ತೂರಿನಲ್ಲಿ ಕೆಲವೊಂದು ಕಾರಣಕ್ಕಾಗಿ ಅಭ್ಯರ್ಥಿಯ ಬದಲಾವಣೆ ಆಗಿದೆ ಎಂದು ಡಾ. ಎಂ. ಕೆ ಪ್ರಸಾದ್ ತಿಳಿಸಿದ್ದಾರೆ.

ಸಂಜೀವ ಮಠಂದೂರು ಅವರ ಬದಲಾವಣೆಗೆ ಜನರ ಒತ್ತಡ ಇತ್ತು. ಜನರೊಂದಿಗೆ ಬೆರೆಯುತ್ತಿಲ್ಲ ಎಂಬ ಅರೋಪ ಅವರ ಮೇಲಿತ್ತು. ಆದರೆ ಅವರು ಪುತ್ತೂರು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಮಾತ್ರ ಅದ್ಭುತ ಎಂದು ಅವರು ಹೇಳಿದ್ದಾರೆ.
ಸೋಲುವ ಹೆದರಿಕೆಯಿಂದ, ಕೆಲವೊಂದು ಕಾರಣಗಳಿಗಾಗಿ ಆರು ತಿಂಗಳ ಹಿಂದೆಯೂ ಒಂದು ಬಾರಿ ಪತ್ರ ಬರೆದಿದ್ದೆ. ಇದೀಗ ಆಶಾ ತಿಮ್ಮಪ್ಪ ಗೌಡ ನಮ್ಮ ಅಭ್ಯರ್ಥಿಯಾಗಿದ್ದಾರೆ ಎಂದು ಡಾ.ಎಂ.ಕೆ.ಪ್ರಸಾದ್ ಹೇಳಿದರು.