ದೇವರಿಗಾಗಿ ಶಿರವನ್ನು ಛೇಧಿಸಿ ಅಗ್ನಿಕುಂಡಕ್ಕೆ ಅರ್ಪಿಸಿಕೊಂಡ ದಂಪತಿ: ತಾವೇ ತಯಾರಿಸಿದ ಯಂತ್ರದ ಮೂಲಕ ಶಿರವನ್ನು ಕತ್ತರಿಸಿಕೊಂಡರೇ ದಂಪತಿ
ದೈವ ಭಕ್ತಿಯ ಪರಾಕಾಷ್ಟೇಯೇ ಎಂಬಂತೆ ದಂಪತಿಯೊಂದು ತಮ್ಮ ಶಿರಶ್ಚೇಧ ಮಾಡಿಕೊಂಡು ದೇವರಿಗೆ ಅರ್ಪಿಸಿದ ಘಟನೆ ವರದಿಯಾಗಿದೆ. ಘಟನೆ ಯಿಂದ ಮೃತಪಟ್ಟವರನ್ನು ಗುಜರಾತ್ ನ ರಾಜ್ ಕೋಟ್ ನಿವಾಸಿ ಹೇಮು ಭಾಯಿ ಮಕ್ವನ ಮತ್ತು ಅವರ ಪತ್ನಿ ಹಂಸುಬೆನ್ ಎಂದು ತಿಳಿದುಬಂದಿದೆ.

ಅಪಾರ ದೈವ ಭಕ್ತಿಯನ್ನು ಹೊಂದಿದ್ದ ದಂಪತಿಗಳು ದೇವರಿಗಾಗಿ ಎಲ್ಲವನ್ನೂ ತ್ಯಾಗಕ್ಕೂ ಸಿದ್ದರಿದ್ದು ತಮ್ಮ ಜೀವವನ್ನೇ ದೇವರಿಗಾಗಿ ಅರ್ಪಿಸಿದ್ದಾರೆ ಎನ್ನಲಾಗಿದೆ.
ತಮ್ಮ ಗುಡಿಸಲಿನಲ್ಲಿ ದಂಪತಿ ಪ್ರತಿನಿತ್ಯ ದೇವರ ಪೂಜೆಯನ್ನು ಮಾಡುತ್ತಿದ್ದು ದೇವರಿಗಾಗಿ ತಮ್ಮ ಪ್ರಾಣವನ್ನು ಅರ್ಪಿಸಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಒಂದು ಯೋಜನೆಯನ್ನು ರೂಪಿಸಿ ತಮ್ಮ ಮನೆಯಲ್ಲೇ ಒಂದು ಶಿರಚ್ಛೇದ ಯಂತ್ರವನ್ನು ತಯಾರಿಸಿದ್ದಾರೆ. ಆ ಬಳಿಕ ಒಂದು ಅಗ್ನಿಕುಂಡವನ್ನು ಮಾಡಿದ್ದಾರೆ. ಶಿರಚ್ಛೇದದ ಯಂತ್ರಕ್ಕೆ ಒಂದು ಹಗ್ಗವನ್ನು ಕಟ್ಟಿದ್ದು ಹಗ್ಗ ಎಳೆದರೆ ಕಟ್ಟಿದ್ದ ಬ್ಲೇಡ್ ತಮ್ಮ ಶಿರಕ್ಕೆ ಬೀಳುತ್ತದೆ. ತಮ್ಮ ಶಿರ ಅಗ್ನಿಕುಂಡಕ್ಕೆ ಬೀಳಬೇಕು ಎನ್ನುವ ಯೋಜನೆಯನ್ನು ಹಾಕಿಕೊಂಡು ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ದಂಪತಿಗಳು ಹಗ್ಗವನ್ನು ಎಳೆದಿದ್ದಾರೆ. ಆಗ ಚೂಪಾದ ಬೃಹತ್ ಬ್ಲೇಡ್ ವೊಂದು ಅವರ ಕುತ್ತಿಗೆಗೆ ಬಂದು ತಾಗಿದ ಪರಿಣಾಮ ಅವರ ಶಿರ ದೇಹದಿಂದ ಬೇರ್ಪಟ್ಟು ನೇರವಾಗಿ ಅಗ್ನಿಕುಂಡಕ್ಕೆ ಹೋಗಿ ಉರುಳಿ ಬಿದ್ದಿದೆ. ಆ ಮೂಲಕ ದಂಪತಿಗಳು ತಮ್ಮ ಪ್ರಾಣವನ್ನೇ ದೇವರ ಆಚರಣೆಯ ನೆಪದಲ್ಲಿ ಅರ್ಪಿಸಿದ್ದಾರೆ.
ಸ್ಥಳದಿಂದ ಡೆತ್ ನೋಟ್ ಸಿಕ್ಕಿದ್ದು, ಅದರಲ್ಲಿ ತಮ್ಮ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಕುಟುಂಬದವರಿಗೆ ಹೇಳಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ದಂಪತಿಯ ಮಕ್ಕಳು ಸಂಬಂಧಿಕರ ಮನೆಯಲ್ಲಿ ವಾಸಿಸುತ್ತಿದ್ದಾರೆ. ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.