ಕರಾವಳಿ

ಸುಳ್ಯದಲ್ಲಿ ಕೇಂದ್ರ ಪೊಲೀಸ್ ಪಡೆ ಮತ್ತು ಪೊಲೀಸ್ ತುಕಡಿಗಳ ಪಥ ಸಂಚಲನ: ಚುನಾವಣೆ ಹಿನ್ನಲೆ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಬಂದೋಬಸ್ತ್



ಇದೇ ಬರುವ ವಿಧಾನಸಭಾ ಚುನಾವಣೆ ಮತದಾರರು ಹೆಚ್ಚು ಆತ್ಮವಿಶ್ವಾಸದಿಂದ ಮತ ಚಲಾವಣೆ ಮಾಡಬೇಕೆಂಬ ಉದ್ದೇಶದಿಂದ ಕಾನೂನು ಸುವ್ಯವಸ್ಥೆ ಪಾಲನೆಗಾಗಿ ರಾಜ್ಯದಾದ್ಯಂತ ಪೊಲೀಸ್ ಇಲಾಖೆ ಕಟ್ಟೆಚ್ಚರವನ್ನು ವಹಿಸುತ್ತಿದೆ. ಇದರ ಹಿನ್ನೆಲೆಯಲ್ಲಿ ದ ಕ ಜಿಲ್ಲಾ ವ್ಯಾಪ್ತಿಯಲ್ಲಿ ಚುನಾವಣೆಗೆ ಸಂಬಂದಿಸಿದ ಕರ್ತವ್ಯಗಳನ್ನು ನಿರ್ವಹಿಸಲು ಮೊದಲ ಹಂತದಲ್ಲಿ 4 ಸಿ.ಆರ್.ಪಿ.ಎಪ್ ಪಡೆ ಆಗಮಿಸಿದ್ದು
ಇಂದು ಸುಳ್ಯದ ಪ್ರಮುಖ ಹಾಗೂ ಸೂಕ್ಷ್ಮ ಸ್ಥಳಗಳಲ್ಲಿ ಸಿ ಆರ್ ಪಿ ಎಫ್ ಮತ್ತು ಪೊಲೀಸ್ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ಪಥಸಂಚಲನ ನಡೆಯಿತು.


ಪುತ್ತೂರು ವಿಭಾಗದ ಡಿವೈಎಸ್ಪಿ ಡಾ. ವೀರಯ್ಯ ಹಿರೇಮಠ ರವರ ನೇತೃತ್ವದಲ್ಲಿ ನಡೆದ ಪಥ ಸಂಚಲನದಲ್ಲಿ ಸುಳ್ಯ ವೃತ್ತ ನಿರೀಕ್ಷಕ ರವೀಂದ್ರ ಸಿಎಂ, ಸುಳ್ಯ ಠಾಣಾ ಉಪನಿರೀಕ್ಷಕ ದಿಲೀಪ್, ತನಿಕ ವಿಭಾಗದ ಎಸ್ ಐ ಶಾಹಿದ್ ಆಫ್ರಿದಿ, ಸೇರಿದಂತೆ CRPF ಪಡೆ ಹಾಗೂ ಸ್ಥಳೀಯ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಭಾಗವಹಿಸಿದ್ದರು.

ಸುಳ್ಯ ನಗರದ ನಾವೂರು, ಜಟ್ಟಿಪಳ್ಳ, ಶ್ರೀರಾಮ್ ಪೇಟೆ, ವಿವೇಕಾನಂದ ಸರ್ಕಲ್, ಕುರುಂಜಿ ಬಾಗ್, ಹಾಗೂ ರಥ ಬೀದಿಯಲ್ಲಿ ಆಕರ್ಷಕ ಪಥಸಂಚಲನ ನಡೆಸಿ ಸಾರ್ವಜನಿಕರಿಗೆ ಧೈರ್ಯ ತುಂಬುವ ಕಾರ್ಯವನ್ನು ಮಾಡಿದರು.

Leave a Reply

Your email address will not be published. Required fields are marked *

error: Content is protected !!