ಕರಾವಳಿಕ್ರೈಂ

ಮಂಗಳೂರು: ದ್ವಿಚಕ್ರ ವಾಹನ ಕಳ್ಳತನ ಪ್ರಕರಣ-ನಾಲ್ವರು ಸಿಸಿಬಿ ಪೊಲೀಸರ ಬಲೆಗೆ

ಮಂಗಳೂರು: ನಾಲ್ವರು ಬೈಕ್ ಕಳ್ಳರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ದ್ವಿಚಕ್ರ ವಾಹನ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ
ಕಸಬಾ ಬೆಂಗರೆ ನಿವಾಸಿಯಾದ ಮೊಹಮ್ಮದ್ ಸಿನಾನ್(19. ವ ), ಕಸಬಾ ಬೆಂಗರೆ ನಿವಾಸಿ ಮೊಹಮ್ಮದ್ ಸಾಹಿಲ್(22. ವ ), ಉಳ್ಳಾಲ ನಿವಾಸಿ ಫೈಜಲ್ (35. ವ ) ಹಾಗೂ ಪಡುಬಿದ್ರಿ ಕಂಚಿನಡ್ಕ ನಿವಾಸಿ ಮೊಹಮ್ಮದ್ ಸಾಹಿಲ್(18. ವ ) ಬಂಧಿತ ಆರೋಪಿಗಳು.

ಮಂಗಳೂರು ಸಿಸಿಬಿ ಘಟಕದ ಎಸಿಪಿ ಪಿಎ ಹೆಗಡೆ ಅವರ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳಿಂದ 2,15,000 ಮೌಲ್ಯದ 6 ಬೈಕ್ ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

Leave a Reply

Your email address will not be published. Required fields are marked *

error: Content is protected !!