ಸುಳ್ಯ: ರೇಂಜ್ ಎಸ್.ಜೆ.ಎಂ ವತಿಯಿಂದ ಜಲ್ಸತುಲ್ ವಿದಾಯ, ಮದರಸ ಅಧ್ಯಾಪಕರಿಗೆ ರಮಳಾನ್ ಕಿಟ್ ವಿತರಣೆ
ಅಜಾನ್ ಕುರಿತು ಈಶ್ವರಪ್ಪ ಹೇಳಿಕೆಗೆ ಎಸ್.ಜೆ.ಎಂ, ಎಸ್.ಎಂ. ಎ ಖಂಡನೆ
ಸುಳ್ಯ : ಸುನ್ನಿ ಜಂಯ್ಯತುಲ್ ಮುಅಲ್ಲಿಮೀನ್ ಸುಳ್ಯ ರೇಂಜ್ ಇದರ ವತಿಯಿಂದ ಮದರಸ ಅಧ್ಯಾಪಕರನ್ನು ಬಿಳ್ಕೊಡುವ ಕಾರ್ಯಕ್ರಮ ಹಾಗೂ ರಮಳಾನ್ ಕಿಟ್ ವಿತರಣೆ ಗಾಂಧಿನಗರ ಮುನವ್ವಿರುಲ್ ಇಸ್ಲಾಂ ಮದರಸ ಗಾಂಧಿನಗರ ಇದರ ಸಭಾಂಗಣದಲ್ಲಿ ಇಂದು ನಡೆಯಿತು.
ಇತ್ತೀಚೆಗೆ ಮಂಗಳೂರು ಭಾಗದಲ್ಲಿ ನಡೆದ ಬಿ ಜೆ ಪಿ.ಯ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕೆ. ಎಸ್ ಈಶ್ವರಪ್ಪ ಅವರು ಆಜಾನ್ ಕುರಿತು ಹಾಗೂ ಅಲ್ಲಾಹನ ಕುರಿತು ನಿಂದನಾತ್ಮಕ ಪದಗಳನ್ನು ಬಳಸಿರುವುದು ದೊಡ್ಡ ತಪ್ಪಾಗಿದ್ದು ಅವರ ಹೇಳಿಕೆಯನ್ನು ಸುಳ್ಯ ಎಸ್ ಜೆ ಎಂ ಹಾಗೂ ಎಸ್ ಎಂ ಎ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ರೇಂಜ್ ಸಮಿತಿ ಅಧ್ಯಕ್ಷ ಮಹಮ್ಮದ್ ಸಕಾಫಿ ಅಲ್ ಹಿಕಮಿ ವಹಿಸಿದ್ದರು. ದುವಾಶಿರ್ವಚನ ಮೂಲಕ ಎಸ್ ಜೆ ಎಂ ಜಿಲ್ಲಾಧ್ಯಕ್ಷ ಇಬ್ರಾಹಿಂ ಸಖಾಫಿ ಪುಂಡೂರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಗಾಂಧಿನಗರ ಜಮಾಅತ್ ಆಡಳಿತ ಸಮಿತಿ ಅಧ್ಯಕ್ಷ ಹಾಜಿ ಕೆ ಎಂ ಮುಸ್ತಫ, ಎಸ್ ಎಂ ಎ ಸುಳ್ಯ ರಿಜಿನಲ್ ಕಾರ್ಯಧರ್ಶಿ ಅಬ್ದುಲ್ ಲತೀಫ್ ಸಕಾಫಿ ಗೂನಡ್ಕ,ಮುಖಂಡರಾದ ಇಬ್ರಾಹಿಂ ಸಖಾಫಿ ಪುಂಡೂರು ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡಿದರು.
ವೇದಿಕೆಯಲ್ಲಿ ಎಸ್ ಎಂ ಎ ಸುಳ್ಯ ಅಧ್ಯಕ್ಷ ಹಮೀದ್ ಬೀಜಕೊಚ್ಚಿ, ಎಸ್ ಎಂ ಎ ಸುಳ್ಯ ಕೋಶಾಧಿಕಾರಿ ಲತೀಫ್ ಹರ್ಲಡ್ಕ, ಅನ್ಸಾರಿಯ ಎಜುಕೇಶನ್ ಸೆಂಟರ್ ಗಲ್ಫ್ ಕೊಆರ್ಡಿನೇಟರ್ ಹಾಜಿ ಎಸ್ ಎಂ ಹಮೀದ್, ಎಸ್ ವೈ ಎಸ್ ಸುಳ್ಯ ಝೋನ್ ಕೋಶಾಧಿಕಾರಿ ಸಿದ್ದೀಕ್ ಕಟ್ಟೆಕ್ಕಾರ್, ಎಸ್ ಎಂ ಎ ವೆಲ್ಪೇರ್ ಅಧ್ಯಕ್ಷ ಅಬೂಬಕ್ಕರ್ ಮುಸ್ಲಿಯಾರ್ ಉಪಸ್ಥಿತರಿದ್ದರು.
ಎಸ್ ಎಂ ಎ ಪ್ರಧಾನ ಕಾರ್ಯದರ್ಶಿ ನಿಜಾರ್ ಸಖಾಫಿ ಸ್ವಾಗತಿಸಿ, ಕೋಶಾಧಿಕಾರಿ ಶಾಹುಲ್ ಹಮೀದ್ ಸಖಾಫಿ ವಂದಿಸಿದರು.
ಈ ಸಂದರ್ಭದಲ್ಲಿ 2021,2022ನೇ ಸಾಲಿನ ಪಬ್ಲಿಕ್ ಪರೀಕ್ಷೆಯಲ್ಲಿ ರ್ಯಂಕ್ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.